Select Your Language

Notifications

webdunia
webdunia
webdunia
webdunia

ಒಂದೇ ಐಪಿಎಲ್ ನಲ್ಲಿ ಬಟ್ಲರ್ ಗೆ 4 ಶತಕಗಳ ಖ್ಯಾತಿ, ಮೊಹಮ್ಮದ್ ಸಿರಾಜ್ ಗೆ ಸಿಕ್ಸರ್ ಗಳ ಕುಖ್ಯಾತಿ

ಒಂದೇ ಐಪಿಎಲ್ ನಲ್ಲಿ ಬಟ್ಲರ್ ಗೆ 4 ಶತಕಗಳ ಖ್ಯಾತಿ, ಮೊಹಮ್ಮದ್ ಸಿರಾಜ್ ಗೆ ಸಿಕ್ಸರ್ ಗಳ ಕುಖ್ಯಾತಿ
ಅಹಮ್ಮದಾಬಾದ್ , ಶನಿವಾರ, 28 ಮೇ 2022 (09:10 IST)
ಅಹಮ್ಮದಾಬಾದ್: ಒಂದೇ ಐಪಿಎಲ್ ನಲ್ಲಿ ಗರಿಷ್ಠ ಶತಕ ದಾಖಲಿಸಿದ ದಾಖಲೆ ಜೋಸ್ ಬಟ್ಲರ್ ಪಾಲಾದರೆ, ಒಂದೇ ಐಪಿಎಲ್ ನಲ್ಲಿ ಗರಿಷ್ಠ ಸಿಕ್ಸರ್ ನೀಡಿದ ಕುಖ್ಯಾತಿ ಆರ್ ಸಿಬಿ ವೇಗಿ ಮೊಹಮ್ಮದ್ ಸಿರಾಜ್ ರದ್ದಾಗಿದೆ.

ನಿನ್ನೆ ನಡೆದ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಜೋಸ್ ಬಟ್ಲರ್ ಮತ್ತೊಂದು ಶತಕ ಸಿಡಿಸಿದರು. ಇದರೊಂದಿಗೆ ಈ ಐಪಿಎಲ್ ನಲ್ಲಿ ಅವರು 4 ಶತಕ ಸಿಡಿಸಿದರು. ಐಪಿಎಲ್ ಇತಿಹಾಸದಲ್ಲೇ ಓರ್ವ ಬ್ಯಾಟಿಗ ಒಂದೇ ಕೂಟದಲ್ಲಿ 4 ಶತಕ ಸಿಡಿಸಿದ್ದು ಇದೇ ಮೊದಲು.

ಇನ್ನು, ಆರ್ ಸಿಬಿ ವೇಗಿ ಮೊಹಮ್ಮದ್ ಸಿರಾಜ್ ಒಂದೇ ಐಪಿಎಲ್ ನಲ್ಲಿ ತಮ್ಮ ಬೌಲಿಂಗ್ ನಲ್ಲಿ 30 ಸಿಕ್ಸರ್ ಚಚ್ಚಿಸಿಕೊಂಡರು. ಈ ಮೂಲಕ ಬೇಡದ ದಾಖಲೆ ತಮ್ಮ ಹೆಸರಿಗೆ ಬರೆದುಕೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2022: ಬಟ್ಲರ್ ಸ್ಪೋಟಕ ಶತಕದಿಂದ ಹೊರಬಿದ್ದ ಆರ್ ಸಿಬಿ