ಟಿ-20 ಕ್ರಿಕೆಟ್ ನಲ್ಲಿ ಸೋಲರಿಯದ ತಂಡವಾಗಿ ಮುನ್ನುಗ್ಗುತ್ತಿರುವ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆಯಲಿರುವ ಸರಣಿಯಲ್ಲಿ ವಿಶ್ವದಾಖಲೆ ಬರೆಯುವ ಅವಕಾಶ ಹೊಂದಿದೆ.
ಭಾರತ ತಂಡ ಜೂನ್ 9ರಿಂದ ಆರಂಭಗೊಳ್ಳಲಿರುವ 5 ಪಂದ್ಯಗಳ ಟಿ-20 ಸರಣಿಯನ್ನು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ.
ಭಾರತ ಪ್ರಸ್ತುತ ಸತತ 12 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದು, ಆಫ್ಘಾನಿಸ್ಥಾನ ಮತ್ತು ರೊಮೆನಿಯಾ ಜೊತೆ ಸ್ಥಾನ ಹಂಚಿಕೊಂಡಿದೆ. ಜೂನ್ 9ರಂದು ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿದರೆ ಭಾರತ ಟಿ-20ಯಲ್ಲಿ ಅತೀ ಹೆಚ್ಚು ಸತತ ಗೆಲುವು ದಾಖಲಿಸಿದ ತಂಡ ಎಂಬ ವಿಶ್ವದಾಖಲೆಗೆ ಪಾತ್ರವಾಗಲಿದೆ.
ಭಾರತ ಕೊನೆಯ ಬಾರಿಗೆ ವಿಶ್ವಕಪ್ ಟಿ-20ಯಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಸೋಲುಂಡ ನಂತ ಆಫ್ಘಾನಿಸ್ತಾನ ಮತ್ತು ನಮಿಬಿಯಾ ವಿರುದ್ಧ ಗೆಲುವು ದಾಖಲಿಸಿತ್ತು ನಂತರ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧ ತಲಾ ಮೂರು ಪಂದ್ಯಗಳ ಸರಣಿ ಆಡಿ ಗೆಲುವು ದಾಖಲಿಸಿತ್ತು.