Select Your Language

Notifications

webdunia
webdunia
webdunia
webdunia

ಕುಕ್ಕರ್ ಬ್ಲಾಸ್ಟ್ ಆಗುವ ಸೂಚನೆ ಕೊಡುವ ಲಕ್ಷಣಗಳಿವು

Cooker blast
ಕುಕ್ಕರ್ ಬ್ಲಾಸ್ಟ್ ಆಗುವ ಮೊದಲು ಕೆಲವೊಂದು ಲಕ್ಷಣಗಳು ಕಂಡುಬರುತ್ತವೆ. ಅದನ್ನು ಮೊದಲೇ ಗುರುತಿಸಿದರೆ ಅಪಾಯ ತಪ್ಪಿಸಬಹುದು.
 

ಪ್ರೆಷರ್ ಕುಕ್ಕರ್ ಬ್ಲಾಸ್ಟ್ ಕೆಲವೊಮ್ಮೆ ಗಂಭೀರ ಅಪಾಯಕ್ಕೆ ಕಾರಣವಾಗಬಹುದು. ಎಷ್ಟೇ ಸುರಕ್ಷಿತವಾಗಿ ಇದನ್ನು ನಿರ್ಮಿಸಿದ್ದರೂ ಹಳತಾದಂತೆ ಅಥವಾ ಇನ್ನಿತರ ಕಾರಣಗಳಿಗೆ ಬ್ಲಾಸ್ಟ್ ಆಗುವ ಅಪಾಯವಿರುತ್ತದೆ. ಗ್ಯಾಸ್ಗೆಟ್ ಸಮಸ್ಯೆ, ವಿಶಲ್ ಸಮಸ್ಯೆ, ಸೇಫ್ಟೀ ವಾಲ್ ದೋಷಗಳಿದ್ದಾಗ ಕುಕ್ಕರ್ ಬ್ಲಾಸ್ಟ್ ಆಗುವ ಸಾಧ್ಯತೆಗಳಿರುತ್ತವೆ.
 

ಕುಕ್ಕರ್ ಬ್ಲಾಸ್ಟ್ ಆಗುವ 5 ಲಕ್ಷಣಗಳು

-ಯಾವತ್ತಿನ ಹೊತ್ತಿಗೆ ವಿಶಲ್ ಹಾಕದೇ ಇದ್ದರೆ ಅಪಾಯದ ಲಕ್ಷಣ ಎನ್ನಬಹುದು. ಪ್ರೆಷರ್ ಹಿಡಿದಿಟ್ಟುಕೊಳ್ಳಲು ಆಗದೇ ಹೋದಾಗ ಕುಕ್ಕರ್ ಬ್ಲಾಸ್ಟ್ ಆಗುತ್ತದೆ.
-ಕುಕ್ಕರ್ ಗೆ ಗ್ಯಾಸ್ಗೆಟ್ ಹಾಕಿದ್ದರೂ ಹಬೆ ಹೊರಗೆ ಹೋಗುತ್ತಿದ್ದರೆ ಬ್ಲಾಸ್ಟ್ ಆಗುವ ಲಕ್ಷಣ.
-ಲಿಡ್ ವಿಪರೀತ ಅಲ್ಲಾಡುತ್ತಿದ್ದರೆ, ಮೇಲೆ ಕೆಳಗೆ ಆಗುತ್ತಿದ್ದರೆ ಗಮನಿಸಿ.
-ಸೇಫ್ಟೀ ವಾಲ್ ಮೂಲಕ ಸಡನ್ ಆಗಿ ವಿಪರೀತ ಲೀಕೇಜ್, ಶಬ್ಧವಾಗುತ್ತಿದ್ದರೆ ತಕ್ಷಣವೇ ಆಫ್ ಮಾಡಿ.
-ಒಳಗಿರುವ ಆಹಾರ ಹೊತ್ತಿದ ವಾಸನೆ ಬರುತ್ತಿದ್ದರೆ ತಕ್ಷಣವೇ ಸ್ಟವ್ ಆಫ್ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಡುಗೆಮನೆಯಲ್ಲಿಯೇ ಇದೆ ದಿನನಿತ್ಯ ಕಾಡುವ ಗ್ಯಾಸ್ಟ್ರಿಕ್‌ಗೆ ರಾಮಬಾಣ