ಯಶಸ್ಸು ಸಿಗಬೇಕಾದರೆ ಏನು ಮಾಡಬೇಕು? ಇಂದಿನ ಯುವ ಜನಾಂಗ ಒಂದು ಯಶಸ್ಸಿಗಾಗಿ ಇನ್ನಿಲ್ಲದ ಸಾಹಸ ಮಾಡುತ್ತದೆ. ಹಾಗಿದ್ದರೆ ಯಶಸ್ಸಿಗಾಗಿ ಏನು ಮಾಡಬೇಕು? ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಹಿಂದೊಮ್ಮೆ ಕಾರ್ಯಕ್ರಮವೊಂದರಲ್ಲಿ ನೀಡಿದ ಸಲಹೆ ಹೀಗಿದೆ.
ಹಿಂದಿನ ಕಾಲದಲ್ಲಿ ಕೆಲಸ ಸಿಗುವುದೇ ಕಷ್ಟವಾಗಿತ್ತು. ನಾನು ಕೆಲಸಕ್ಕಾಗಿ ಕಷ್ಟಪಟ್ಟಿದ್ದೆ. ಹೀಗಾಗಿ ನಾನು ಇಂದಿನ ಯುವ ಜನಾಂಗಕ್ಕೆ ಮನವಿ ಮಾಡುತ್ತೇನೆ. ಇದು ನಿಮ್ಮ ಸಮಯ. ನಿಮಗೆ ಸಿಕ್ಕ ಕೆಲಸವನ್ನು ಪರಿಶ್ರಮಪಟ್ಟು ಮಾಡಿ. ಕಠಿಣ ಪರಿಶ್ರಮವೇ ಯಶಸ್ಸಿಗೆ ಹಾದಿ.
ಹೊರಗಿನವರಿಗೆ ನಮ್ಮ ದೇಶ ಬಡತನದ ದೇಶವಾಗಿತ್ತು. ಅದನ್ನು ನಾವು ತೊಡೆದು ಹಾಕಬೇಕು ಎಂದರೆ ಯುವ ಜನಾಂಗ ಕಷ್ಟಪಟ್ಟು ಕೆಲಸ ಮಾಡಬೇಕು. ನಮಗೆಲ್ಲಾ ವಯಸ್ಸಾಯ್ತು. ಈಗ ನಿಮ್ಮ ಸಮಯ. ನೀವು ಮ್ಯಾರಥಾನ್ ನಲ್ಲಿ ಓಡಬೇಕು. ನೀವೇ ಭಾರತದ ಅಭಿವೃದ್ಧಿಗೆ, ಭಾರತದ ಯಶಸ್ಸಿಗೆ ದುಡಿಯಬೇಕು.
ಹೀಗಾಗಿ ನಿಮಗೆ ಸಿಕ್ಕಿರುವ ಸಮಯವನ್ನು ದಯಮಾಡಿ ವ್ಯರ್ಥ ಮಾಡಬೇಡಿ. 60 ರ ದಶಕದಲ್ಲಿ ಕೆಲಸ ಸಿಕ್ಕುವುದೇ ಕಷ್ಟವಾಗಿತ್ತು. ಆದರೆ ಈಗ ಹಾಗಲ್ಲ. ನಿಮಗೆ ಸಿಗುವ ಅವಕಾಶವನ್ನು ಬಳಸಿಕೊಳ್ಳಿ, ಕಠಿಣ ಪರಿಶ್ರಮಪಡಿ. ಕಷ್ಟಪಟ್ಟರೆ ಖಂಡಿತಾ ಯಶಸ್ಸು ನಿಮ್ಮದಾಗುವುದು ಎಂದು ಅವರು ಕಾರ್ಯಕ್ರಮವೊಂದರಲ್ಲಿ ಸಲಹೆ ನೀಡಿದ್ದರು.