ಪ್ರತಿನಿತ್ಯ ಬಳಸುವ ಸಾಕ್ಸ್ ತುಂಬಾ ಕೊಳೆಯಾಗಿ ಬಿಡುತ್ತದೆ ಮತ್ತು ವಾಸನೆ ಹೊಂದಿರುತ್ತದೆ. ಇದನ್ನು ಮೊದಲಿನಂತೆ ಹೊಳಪು ಬರಿಸಲು ಇಲ್ಲಿದೆ ಟಿಪ್ಸ್.
ಬಿಳಿ ಸಾಕ್ಸ್ ಕೊಳಕಾಗಿ ಬಣ್ಣ ಕಳೆದುಕೊಂಡಿದ್ದರೆ ಅದನ್ನು ಮೊದಲಿನಂತೆ ಶುಭ್ರವಾಗಿಸಲು ಸಾಧ್ಯವಿದೆ. ಅದಕ್ಕಾಗಿ ಮುಖ್ಯವಾಗಿ ಬೇಕಾಗಿರುವುದು ಬೇಕಿಂಗ್ ಸೋಡಾ ಮತ್ತು ಹದ ಬಿಸಿ ನೀರು. ತೊಳೆಯುವ ಪ್ರಕ್ರಿಯೆ ಇಲ್ಲಿದೆ ನೋಡಿ.
-ಮೊದಲು ಹದ ಬಿಸಿ ನೀರಿನಲ್ಲಿ ಒಂದು ಗಂಟೆ ಕಾಲ ಕೊಳೆಯಾದ ಸಾಕ್ಸ್ ನ್ನು ನೆನೆಸಿಡಿ. ಇದರಿಂದ ಕಠಿಣ ಕಲೆಗಳು ನೆನೆದು ತೊಳೆಯಲು ಸುಲಭವಾಗುತ್ತದೆ.
-ಈಗ ಇದಕ್ಕೆ ಒಂದೆರಡು ಸ್ಪೂನ್ ಬೇಕಿಂಗ್ ಸೋಡಾ, ಆಕ್ಸಿಜನ್ ಬ್ಲೀಚ್ ಹಾಕಿ.
-ಬಳಿಕ ಅರ್ಧ ಕಪ್ ವೈಟ್ ವಿನೇಗರ್ ದ್ರಾವಣವನ್ನು ಸೇರಿಸಿ. ಇದು ಕೊಳೆಯನ್ನು ಶುಭ್ರವಾಗಿಸಲು ಸಹಕಾರಿ.
-ಈಗ ಕಾಲು ಗಂಟೆ ಬಿಟ್ಟು ಮಾಮೂಲಾಗಿ ಸಾಕ್ಸ್ ತೊಳೆಯಿರಿ. ಇದರಿಂದ ಕೊಳೆಯೆಲ್ಲಾ ಹೋಗಿ ಮೊದಲಿನ ಕಲರ್ ಬರುತ್ತದೆ.