Select Your Language

Notifications

webdunia
webdunia
webdunia
webdunia

ಡಾ ಸಿಎನ್ ಮಂಜುನಾಥ್ ಪ್ರಕಾರ ಜೀವನದಲ್ಲಿ ಸಂತೋವಿರಬೇಕಾದರೆ ಈ ಮೂರು ಪದಗಳನ್ನು ಬಿಡಬೇಕು

Dr CN Manjunath

Krishnaveni K

ಬೆಂಗಳೂರು , ಶನಿವಾರ, 2 ಆಗಸ್ಟ್ 2025 (10:19 IST)
ಜೀವನದಲ್ಲಿ ಪ್ರತಿಯೊಬ್ಬರು ಸಂತೋಷವಾಗಿರಬೇಕೆಂದು ಬಯಸುತ್ತಾರೆ. ಜೀವನದಲ್ಲಿ ಸಂತೋಷವಿರಬೇಕೆಂದರೆ ಈ ಮೂರು ಪದಗಳನ್ನು ಬಿಡಬೇಕು ಎಂದು ಈ ಹಿಂದೆ ಡಾ ಸಿಎನ್ ಮಂಜುನಾಥ್ ಹೇಳಿದ್ದರು.

ಡಾ ಸಿಎನ್ ಮಂಜುನಾಥ್ ಕೇವಲ ಹೃದ್ರೋಗ ತಜ್ಞ ಮಾತ್ರವಲ್ಲ. ಸುಖ ಜೀವನಕ್ಕೆ ಅಮೂಲ್ಯವಾದ ಸಲಹೆಗಳನ್ನು ಅನೇಕ ಬಾರಿ ನೀಡಿದ್ದಾರೆ. ಈ ರೀತಿ ಅವರು ನೀಡಿದ ಈ ಒಂದು ಸಲಹೆ ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಂತೋಷ ತಾನಾಗಿಯೇ ಇರುತ್ತದೆ.

ಡಾ ಸಿಎನ್ ಮಂಜುನಾಥ್ ಪ್ರಕಾರ ಜೀವನದಲ್ಲಿ ಸಂತೋಷವಾಗಿರಬೇಕೆಂದರೆ ಮೂರು ವಿಚಾರಗಳನ್ನು ಬಿಡಬೇಕು. ಮೊದಲನೆಯದ್ದು ಅಹಂಕಾರ. ಇದಿದ್ದರೆ ಜೀವನದಲ್ಲಿ ಬೆಳೆಯಲು ಸಾಧ್ಯವಿಲ್ಲ. ಅಹಂಕಾರದಿಂದ ನೋವೇ ಹೆಚ್ಚು.

ಎರಡನೆಯದ್ದು ಅಸೂಯೆ. ನಮ್ಮ ಜೀವನದ ಎಲ್ಲಾ ಸಮಸ್ಯೆಗಳಿಗೂ ಇದುವೇ ಮೂಲ ಕಾರಣ. ಇನ್ನೊಬ್ಬರ ಬಗ್ಗೆ ಹೊಟ್ಟೆಕಿಚ್ಚು ಪಡುವುದು ನಮ್ಮ ನೆಮ್ಮದಿಯನ್ನು ನಾವೇ ಕಳೆದುಕೊಂಡಂತೆ. ಮೂರನೆಯದ್ದು ಅವಮಾನ. ಇನ್ನೊಬ್ಬರಿಗೆ ಅವಮಾನ ಮಾಡುವುದು, ನಾವೇ ಅವಮಾನ ಅನುಭವಿಸುವಂತಹ ಸಂದರ್ಭಗಳಿಂದ ನೆಮ್ಮದಿ ಹಾಳು. ಈ ಮೂರು ವಿಚಾರಗಳನ್ನು ಬಿಟ್ಟಲ್ಲಿ ಸಂತೋಷ ತಾನಾಗಿಯೇ ಇರುತ್ತದೆ ಎಂದು ಅವರು ಒಮ್ಮೆ ಹೇಳಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಅಮೆರಿಕಾಗೆ ಮಣಿದು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿದೆಯಾ ಭಾರತ: ಟ್ರಂಪ್ ಹೇಳಿದ್ದೇನು