Select Your Language

Notifications

webdunia
webdunia
webdunia
webdunia

ಅಡುಗೆಮನೆಯಲ್ಲಿಯೇ ಇದೆ ದಿನನಿತ್ಯ ಕಾಡುವ ಗ್ಯಾಸ್ಟ್ರಿಕ್‌ಗೆ ರಾಮಬಾಣ

Gastric problem, diet change, kitchen

Sampriya

, ಸೋಮವಾರ, 26 ಜನವರಿ 2026 (12:25 IST)
Photo Credit X
ಇಂದಿನ ಆಹಾರ ಪದ್ಧತಿಯಿಂದಾಗಿ‌ ಹೆಚ್ಚಿನವರಲ್ಲಿ ಗ್ಯಾಸ್ಟಿಕ್ ಸಮಸ್ಯೆಗಳು ಕಾಣಿಸುತ್ತದೆ. ಇನ್ನೂ ಈ ಸಮಸ್ಯೆಗೆ ಆಹಾರ ಕ್ರಮ‌ಬದಲಾವಣೆ ಜತೆಗೆ ಮನೆಮದ್ದನ್ನು ಮಾಡುವುದು ಒಳ್ಳೆಯದು.

ಗ್ಯಾಸ್ಟ್ರಿಕ್ ಅಥವಾ ಹೊಟ್ಟೆ ಉಬ್ಬರದ ಸಮಸ್ಯೆಗೆ ಅಡುಗೆಮನೆಯಲ್ಲಿಯೇ ಸುಲಭವಾಗಿ ಸಿಗುವ ಪದಾರ್ಥಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು. ನಿಮಗಾಗಿ ಕೆಲವು ಪರಿಣಾಮಕಾರಿ ಮನೆಮದ್ದುಗಳು ಇಲ್ಲಿವೆ:

1. ಜೀರಿಗೆ ನೀರು: ಜೀರಿಗೆಯು ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಗ್ಯಾಸ್ ಸಮಸ್ಯೆಯನ್ನು ಶಮನಗೊಳಿಸುತ್ತದೆ.

2. ಶುಂಠಿ: ಶುಂಠಿಯಲ್ಲಿರುವ ಔಷಧೀಯ ಗುಣಗಳು ಹೊಟ್ಟೆಯ ಉರಿ ಮತ್ತು ಗ್ಯಾಸ್ ಅನ್ನು ಕಡಿಮೆ ಮಾಡುತ್ತದೆ. 

3. ಓಂ ಕಾಳು: ತಕ್ಷಣದ ಪರಿಹಾರಕ್ಕೆ ಓಂ ಕಾಳು ರಾಮಬಾಣ. ಅರ್ಧ ಚಮಚ ಓಂ ಕಾಳನ್ನು ಸ್ವಲ್ಪ ಉಪ್ಪಿನೊಂದಿಗೆ ಬೆರೆಸಿ ಜಗಿದು ನಂತರ ಉಗುರು ಬೆಚ್ಚಗಿನ ನೀರು ಕುಡಿಯಿರಿ. ಇದು ಗ್ಯಾಸ್‌ನಿಂದ ಉಂಟಾಗುವ ಹೊಟ್ಟೆ ನೋವನ್ನು ಬೇಗನೆ ಕಡಿಮೆ ಮಾಡುತ್ತದೆ.

4. ಇಂಗು: ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಒಂದು ಚಿಟಿಕೆ ಇಂಗು ಬೆರೆಸಿ ಕುಡಿಯಿರಿ.

5. ಮಜ್ಜಿಗೆ: ಮಜ್ಜಿಗೆಯು ಹೊಟ್ಟೆಯನ್ನು ತಂಪಾಗಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀ, ಕಾಫಿ ಬದಲು ಮಕ್ಕಳಿಗೆ ಈ ಪಾನೀಯ ನೀಡಿ