Select Your Language

Notifications

webdunia
webdunia
webdunia
webdunia

ಗೃಹಿಣಿಯರಿಗಾಗಿ ಅಡಿಗೆ ಮನೆ ಸ್ಪರ್ಧೆ: ಇಲ್ಲಿದೆ ಸ್ಪರ್ಧೆ ವಿವರ

Adige mane contest

Krishnaveni K

ಬೆಂಗಳೂರು , ಬುಧವಾರ, 3 ಸೆಪ್ಟಂಬರ್ 2025 (08:59 IST)
ಬೆಂಗಳೂರು: ಪ್ರತಿ ಮನೆಯನ್ನೂ ಪೋಷಿಸುವುದು, ಪ್ರೀತಿಯಿಂದ ರುಚಿ-ಶುಚಿಯಾಗಿ ಆಹಾರ  ತಯಾರಿಸಿ, ಅದನ್ನು ಬಡಿಸುವ ಕೈಗಳು. ಈ ಕೈಗಳೇ ಭಾರತೀಯ ಕುಟುಂಬ ವ್ಯವಸ್ಥೆಯ ಆಧಾರ. ಇಂತಹ ಅಡುಗೆ ಮನೆಯ ಸಾಧಕರಿಗೆಂದೇ  ನಮ್ಮ ಬೆಂಗಳೂರಿನಲ್ಲೊಂದು ವಿಶಿಷ್ಟ ಚಾಂಪಿಯನ್ ಶಿಪ್ ಆಯೋಜಿಸಲಾಗಿದೆ. 

ಸಮಗ್ರ ಸಂವಹನ ಮತ್ತು ಬ್ರ್ಯಾಂಡಿಂಗ್ ಸಂಸ್ಥೆಯಾದ ಐಕ್ಯೂ ಕಾಮ್ಸ್, ಪಾಕಶಾಲೆಯ ವೈವಿಧ್ಯತೆಯನ್ನು ಆಚರಿಸಲು  ಕರ್ನಾಟಕದ ಅತಿದೊಡ್ಡ ಅಡುಗೆ ಸ್ಪರ್ಧೆಗಳಲ್ಲಿ ಒಂದಾದ 'ಅಡುಗೆ ಮನೆ ಸೂಪರ್‌ಸ್ಟಾರ್' ಅನ್ನು ಪ್ರಸ್ತುತಪಡಿಸುತ್ತದೆ. ಈ  ಚಾಂಪಿಯನ್ ಶಿಪ್ ನ   ಉದ್ಘಾಟನೆ 'ಸೆಪ್ಟೆಂಬರ್ 20, 2025' ರಂದು ನಗರದ  ವೈಟ್‌ಫೀಲ್ಡ್‌ನ ಹೃದಯಭಾಗದಲ್ಲಿರುವ  'ದಿ ವೈಟ್‌ಫೀಲ್ಡ್ ಕ್ಲಬ್' ನಲ್ಲಿ ನಡೆಯಲಿದೆ.
 
ನಗರದ ಎಲ್ಲಾ ಅಮ್ಮಂದಿರು, ಅಜ್ಜಿಯಂದಿರು, ಎಲ್ಲಾ ಅಡುಗೆ ಉತ್ಸಾಹಿಗಳು,  ಮತ್ತು ಬೇಕರ್‌ಗಳಿಗೆ  ಈ ಸ್ಪರ್ಧೆ ಮುಕ್ತವಾಗಿದ್ದು,  ಸ್ಪರ್ಧೆಗೆ ನೋಂದಣಿಗೆ  September 15th 2025 ಕೊನೆ ದಿನ.
 
ಅಡುಗೆ ಮನೆ ಸೂಪರ್‌ಸ್ಟಾರ್ ಚಾಂಪಿಯನ್ ಶಿಪ್ ನ  ಮೂಲ ಧ್ಯೇಯ:  ದೊಡ  ನಗರಗಳಿಂದ  ಹಿಡಿದು ರಾಜ್ಯದ ಸಣ್ಣ ಪಟ್ಟಣಗಳವರೆಗೆ ಎಲ್ಲಾ  ಭಾಷೆ, ಪ್ರದೇಶ ಮತ್ತು ತಲೆಮಾರುಗಳನ್ನು ಒಳಗೊಂಡಂತೆ  ಜನರನ್ನು ಅಡುಗೆ-ಆಹಾರದ ಮೂಲಕ  ಬೆಸೆಯುವುದಾಗಿದೆ.  ಆಸಕ್ತರು  ‘ಅಡುಗೆ ಮನೆ ಸೂಪರ್‌ಸ್ಟಾರ್   ಅವರ ಅಧಿಕೃತ ಇನ್‌ಸ್ಟಾಗ್ರಾಮ್‌ನ ಬಯೋದಲ್ಲಿ ಇರುವ ಈ  ಲಿಂಕ್  (https://www.instagram.com/adugemanesuperstar/)  ಮೂಲಕ ಅರ್ಜಿಯನ್ನು ಭರ್ತಿ ಮಾಡಿ  ಈ ಚಾಂಪಿಯನ್ ಶಿಪ್ ನಲ್ಲಿ ಹೆಸರು  ನೋಂದಾಯಿಸಿಕೊಳ್ಳಬಹುದು.  ಆಹಾರ ಕ್ಷೇತ್ರದ ದಿಗ್ಗಜರು   ರುಚಿ,  ಪರಿಮಳ,    ಪ್ರಸ್ತುತಿ ಮತ್ತು ಅಡುಗೆ ಹೇಳುವ ಕತೆಗಳ  ಆಧಾರದ ಮೇಲೆ  ವಿಜೇತರನ್ನು ನಿರ್ಣಯಿಸುತ್ತಾರೆ.
2 / 4
 
 
ಪ್ರಸಿದ್ಧ  ಬಾಣಸಿಗ ಅವಿನಾಶ್ ಮಧುಕರ್ ಭಾರ್ವಾಸೆ  ಈ ಅಡುಗೆ ಸ್ಪರ್ಧೆಯ  ವಿಶೇಷ ತೀರ್ಪುಗಾರರು.    ಅವರು ಎಂ ಟಿ ಆರ್ , ಕೈಲಾಶ್ ಪರ್ಬತ್ ಮತ್ತು ಭಾರತದ ಪ್ರಸಿದ್ಧ ರಾಜಧಾನಿ- ರಾಜಸ್ಥಾನಿ ಮತ್ತು ಗುಜರಾತಿ ಥಾಲಿ ಬ್ರ್ಯಾಂಡ್‌ಗಳಿಗೆ  ಕಾರ್ಪೊರೇಟ್ ಬಾಣಸಿಗರಾಗಿದ್ದಾರೆ. ಅವರು ದಿ ಒಬೆರಾಯ್ಸ್, ರಾಡಿಸನ್ ಮತ್ತು ಮ್ಯಾರಿಯಟ್‌ನಂತಹ ಪ್ರಸಿದ್ಧ  ಹೋಟೆಲ್ ಸಂಸ್ಥೆಗಳೊಂದಿಗೆ  ಸಹ ಕೆಲಸ ಮಾಡಿದ್ದಾರೆ. ಅವರು ದೇಶ- ವಿದೇಶಗಳಲ್ಲಿ ಮಾಸ್ಟರ್ ಬಾಣಸಿಗರಾಗಿ ಹಲವಾರು ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.   ಬಾಲಿವುಡ್ ನ ಹಲವಾರು   ಸೆಲೆಬ್ರಿಟಿಗಳಿಗೆ ಅವರು ಸೆಲೆಬ್ರಿಟಿ ಬಾಣಸಿಗರಾಗಿದ್ದಾರೆ.  ಪದ್ಮಶ್ರೀ ಪ್ರಶಸ್ತಿ ವಿಜೇತ ಬಾಣಸಿಗ ಸಂಜೀವ್ ಕಪೂರ್ ಅವರೊಂದಿಗೆ ಸಹ ಇವರು ಕೆಲಸ ಮಾಡಿದ್ದಾರೆ.
 
ಸ್ಪರ್ಧೆಯನ್ನು ತಾನು ಕುತೂಹಲದಿಂದ ಎದುರು ನೋಡುತ್ತಿರುವುದಾಗಿ ತಿಳಿಸಿರುವ   ಬಾಣಸಿಗ ಅವಿನಾಶ್ ಮಧುಕರ್ ಭರ್ವಾಸೆ, "ಆಹಾರವು  ರುಚಿಗಿಂತ ಕೂಡಾ  ಹೆಚ್ಚಿನದು - ಅದು ಒಂದು ಕಥೆ, ನೆನಪು ಮತ್ತು ಸಂಸ್ಕೃತಿಗಳ ನಡುವಿನ ಸೇತುವೆ. ಅಡುಗೆ ಮನೆ ಸೂಪರ್‌ಸ್ಟಾರ್ ಕರ್ನಾಟಕದ ಶ್ರೀಮಂತ ಪಾಕಶಾಲೆಯ ಪರಂಪರೆಯು ರಾಜ್ಯದ ಎಲ್ಲೆಡೆಗಳಿಂದ ಆಗಮಿಸುವ ಪ್ರತಿಭಾವಂತ ಬಾಣಸಿಗರು     ಬೆಳಗಬಹುದಾದ ಸುಂದರ ವೇದಿಕೆಯಾಗಿದೆ. ಮನೆಯ ಅಡುಗೆಮನೆಗಳ ಪ್ರೀತಿ ಮತ್ತು ತಲೆಮಾರುಗಳ ಹೆಮ್ಮೆಯನ್ನು ಹೊತ್ತ ಭಕ್ಷ್ಯಗಳನ್ನು ಸವಿಯುವ ಈ ಪ್ರಯಾಣದ ಭಾಗವಾಗಲು ನಾನು ರೋಮಾಂಚನಗೊಂಡಿದ್ದೇನೆ.  ಕರ್ನಾಟಕವು  ತನ್ನ ಪಾಕಶಾಲೆಯ ಸಂಪತ್ತಿನ ವಿಷಯದಲ್ಲಿ ಜಗತ್ತಿಗೆ ನೀಡಲು ಬಹಳಷ್ಟು ಹೊಂದಿದೆ ಎಂದು ನಾನು ಬಲವಾಗಿ ಭಾವಿಸಿದ್ದೇನೆ," ಎಂದು ಅವರು ಹೇಳಿದರು.
 
 
 
ವೈಟ್‌ಫೀಲ್ಡ್‌ನ ಅತ್ಯಂತ ಜನಪ್ರಿಯವಾದ ಈ ದಿ  ವೈಟ್‌ಫೀಲ್ಡ್‌ ಕ್ಲಬ್, ನಗರದ ನೆರೆಹೊರೆ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ  ನಗರದ   ಸಾಂಸ್ಕೃತಿಕ-ಸಾಮಾಜಿಕ  ಹಾಗು ಇತರ ಕಾರ್ಯಕ್ರಮಗಳಿಗೆ  ವೇದಿಕೆಯಾಗಿದ್ದು, ಈ ಚಾಂಪಿಯನ್ ಶಿಪ್ ನ ಧ್ಯೇಯಗಳಿಗೆ   ಅನುಗುಣವಾಗಿ ಸೇವೆ ಸಲ್ಲಿಸುತ್ತಿದೆ. ನಮ್ಮ  ಆಹಾರ ಮತ್ತು  ಪರಸ್ಪರ ಹಂಚಿಕೊಂಡು ತಿನ್ನುವ  ಸಾಂಸ್ಕೃತಿಕ ಹೆಮ್ಮೆಯ ಆದರ್ಶಗಳಿಗೆ ಅನುಗುಣವಾಗಿ ಸೇವೆ ಸಲ್ಲಿಸುತ್ತಿರುವ ಈ ಸಂಸ್ಥೆ ಈ ವೈಶಿಷ್ಟ್ಯಪೂರ್ಣ ಚಾಂಪಿಯನ್ ಶಿಪ್  ನ ಉದ್ಘಾಟನೆಗೆ ಅತ್ಯಂತ ಪೂರಕ ಸ್ಥಳವಾಗಿದೆ.
 
 
"ಬೆಂಗಳೂರಿನ ಪರಿವರ್ತನೆಗೆ ಸಾಕ್ಷಿಯಾದ ಮತ್ತು ಸಮುದಾಯದ  ಅನ್ಯೋನ್ಯತೆಯ ಬಾಂಧವ್ಯ ಬಲವರ್ಧನೆಗೆ  ವೇದಿಕೆಯಾದ    ಸ್ಥಳ ಇದು. ಅಡುಗೆ ಮನೆ ಸೂಪರ್‌ಸ್ಟಾರ್' ನಲ್ಲಿ ಭಾಗವಹಿಸುವವರು ನಮ್ಮ ರಾಜ್ಯದ  ಶ್ರೀಮಂತ  ಪರಂಪರೆಯನ್ನು ಪ್ರದರ್ಶಿಸಬೇಕು ಮತ್ತು ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ಹಲವು ವರ್ಷಗಳ ಕಾಲದ ಅಡುಗೆ-ಭಕ್ಷ್ಯ ತಯಾರಿಯ ಅನುಭವದ ಶ್ರೀಮಂತಿಕೆಯನ್ನು  ಪ್ರಸ್ತುತಪಡಿಸಬೇಕು.   ಕಾರ್ಯಕ್ರಮದಲ್ಲಿ ಭಾಗವಹಿಸುವಾಗ  ತಮ್ಮ ಇಷ್ಟು ವರ್ಷಗಳ ಕಾಲದ ಸಾಧನೆಯ ಬಗ್ಗೆ ಹೆಮ್ಮೆಯ ಭಾವನೆ ಹೊಂದಿರಬೇಕು  ಎಂದು ನಾವು ಬಯಸುತ್ತೇವೆ" ಎಂದು ವೈಟ್‌ಫೀಲ್ಡ್ ಕ್ಲಬ್‌ನ ಅಧ್ಯಕ್ಷ ರೂಪ್ ಸಿಂಗ್ ತಿಳಿಸಿದರು.
 
3 / 4
ಸ್ಪರ್ಧೆಯ ಕುರಿತು ಮಾತನಾಡಿದ ಐಕ್ಯೂ ಕಾಮ್ಸ್‌ನ ಸಂಸ್ಥಾಪಕ ಫಹಾದ್ ತಲ್ಹಾ, "ಇಂದಿನ ವೇಗದ ಜಗತ್ತಿನಲ್ಲಿ, ಒಂದು ಕಾಲದಲ್ಲಿ ನೆರೆಹೊರೆಯವರು ಮತ್ತು ಕುಟುಂಬಗಳನ್ನು ಒಟ್ಟಿಗೆ ಸೇರಿಸುತ್ತಿದ್ದ ಅನೇಕ ಸಣ್ಣ  ಆದರೆ ಶಕ್ತಿಶಾಲಿ ಸಂಪ್ರದಾಯ-ಆಚರಣೆಗಳನ್ನು  ನಾವು ಕಳೆದುಕೊಂಡಿದ್ದೇವೆ.  'ಅಡುಗೆ ಮನೆ ಸೂಪರ್‌ಸ್ಟಾರ್'  ನಮ್ಮ ನಿಧಾನಗತಿಯ ಬದುಕಿನ, ಒಲೆಯ ಸುತ್ತಲೂ ಒಟ್ಟು  ಸೇರುತ್ತಾ  ಹಂಚಿಕೊಂಡು ತಿನ್ನುವ   ಮತ್ತು ಕರ್ನಾಟಕದ ಶ್ರೀಮಂತ ಅಡುಗೆ  ಸಂಸ್ಕೃತಿಯ ಭಾಗವಾಗಿರುವ  ಸ್ನೇಹ, ತಿಳುವಳಿಕೆ ಮತ್ತಿತರ  ಹೆಮ್ಮೆಯ ಸಾಮಾಜಿಕ  ಸಂಗತಿಗಳನ್ನು ಮರುಸ್ಥಾಪಿಸುವ ನಮ್ಮ ಪ್ರಯತ್ನದ  ಭಾಗ " ಎಂದು ಹೇಳಿದರು.
 
"ಅಡುಗೆ ಮನೆ ಸೂಪರ್‌ಸ್ಟಾರ್   ಕೇವಲ ಒಂದು  ಸ್ಪರ್ಧೆಯಲ್ಲ. ಬದಲಾಗಿ  ಇದು ಒಂದು ಸಾಂಸ್ಕೃತಿಕ ಪುನರ್ಮಿಲನ. ಪ್ರತಿಯೊಬ್ಬ ಸ್ಪರ್ಧಿಗಳೂ  ಕೇವಲ ಪದಾರ್ಥಗಳನ್ನು ಮಾತ್ರವಲ್ಲ, ಅವರ ಪರಂಪರೆಯ ಒಂದು ತುಣುಕನ್ನು ತಮ್ಮೊಂದಿಗೆ ನಮ್ಮ ವೇದಿಕೆಗೆ  ತರುತ್ತಾರೆ. ಅವುಗಳ ಹಿಂದಿನ  ಕಥೆಗಳು ಮತ್ತು ಅಡುಗೆಯ  ಸುವಾಸನೆಗಳು ಬೆರೆತಾಗ,  ಪ್ರತಿಯೊಬ್ಬರೂ ಸವಿಯಬಹುದಾದ  ಮತ್ತು ಅಮೂಲ್ಯವಾದ ಕರ್ನಾಟಕದ ಕತೆಯನ್ನು  ಅವರು ನೇಯುತ್ತಾರೆ" ಎಂದು ಐಕ್ಯೂ ಕಾಮ್ಸ್‌ನ ಸಂಸ್ಥಾಪಕಿ ನೀನಾ ಬಿಸ್ವಾಲ್ ಹೇಳಿದರು.
 
'ಅಡುಗೆ ಮನೆ ಸೂಪರ್‌ಸ್ಟಾರ್'  ಸಮುದಾಯದ ಒಗ್ಗಟ್ಟು , ಉತ್ಸಾಹಕ್ಕೆ  ಒಂದು ದೊಡ್ಡ ವೇದಿಕೆಯಾಗಲಿದೆ.
ಅಪಾರ್ಟ್‌ಮೆಂಟ್ ಸಂಘಗಳು, ಆರ್‌ಡಬ್ಲ್ಯೂಎಗಳು, ಯುವ ಗುಂಪುಗಳು, ಹಿರಿಯರ ವಲಯಗಳು ಮತ್ತು ಕೆಲಸದ ಸ್ಥಳದ ತಂಡಗಳು ಹೀಗೆ ಎಲ್ಲರಿಗೂ ತಮ್ಮ ಅಡುಗೆ ಕೌಶಲ್ಯ ಪ್ರದರ್ಶನಕ್ಕೆ ಈ ಸ್ಪರ್ಧೆ  ವೇದಿಕೆ ಒದಗಿಸಲಿದೆ.   ಪಾಕಶಾಲೆಯ ಚಾಂಪಿಯನ್‌ಗಳಿಗೆ ಪ್ರಶಸ್ತಿ ನೀಡುವುದು ಮಾತ್ರ ಅಲ್ಲ;  ಬದಲಿಗೆ ಈ ಸ್ಪರ್ಧೆ ಮೂಲಕ  ದೈನಂದಿನ ಸಂಬಂಧಗಳನ್ನು  ಪುನರುಜ್ಜೀವನಗೊಳಿಸುವುದು ಇದರ ಉದ್ದೇಶವಾಗಿದೆ.   ಹಂಚಿಕೊಂಡ ಅಡುಗೆಮನೆಗಳು, ಎರವಲು ಪಡೆದ ಮಸಾಲಾ ಪೆಟ್ಟಿಗೆಗಳು ಮತ್ತು ಹಳೆಯ ನೋಟ್‌ಬುಕ್‌ಗಳ ಅಂಚುಗಳಲ್ಲಿ ಬರೆಯಲಾದ ಪಾಕವಿಧಾನಗಳಿಂದ ರೂಪಿಸಲ್ಪಟ್ಟ ಸಂಬಂಧಗಳನ್ನು ಈ ಸ್ಪರ್ಧೆ ಇನ್ನಷ್ಟು ಬಲಪಡಿಸಲಿದೆ.
 
 
ಸ್ಪರ್ಧೆಯ ಸ್ವರೂಪ ಮತ್ತು ಮಾರ್ಗಸೂಚಿ:
 
ಈ ಚಾಂಪಿಯನ್ ಶಿಪ್ ಮುಂದಿನ ತಿಂಗಳುಗಳಲ್ಲಿ ಕರ್ನಾಟಕಾದ್ಯಂತ  ಆಯೋಜಿಸಲ್ಪಡಲಿದೆ.  ಮನೆ ಅಡುಗೆಯವರು, ಹವ್ಯಾಸಿ ಪಾಕ ಪ್ರವೀಣರು,   ಮತ್ತು ಬೇಕಿಂಗ್ ಉತ್ಸಾಹಿಗಳನ್ನು ಕೌಟುಂಬಿಕ ಪಾಕವಿಧಾನಗಳು, ಪ್ರಾದೇಶಿಕ ವಿಶೇಷತೆಗಳು ಮತ್ತು ರಾಜ್ಯದ ಶ್ರೀಮಂತ ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಹಬ್ಬದ ಪ್ರಧಾನ ಆಹಾರಗಳನ್ನು   ಪ್ರದರ್ಶಿಸಲು  ಈ ಸ್ಪರ್ಧೆ ವೇದಿಕೆ ಒದಗಿಸಲಿದೆ.
 
ಅಡುಗೆ ಮನೆ ಸೂಪರ್‌ಸ್ಟಾರ್ ಕರ್ನಾಟಕದಾದ್ಯಂತ ನಗರ ಮತ್ತು ಜಿಲ್ಲಾ ಮಟ್ಟದ ಪ್ರದರ್ಶನಗಳ ದಿನಾಂಕವನ್ನು  ಬಿಡುಗಡೆ ಮಾಡಲಿದ್ದು, ಮುಂದಿನ ವರ್ಷ 2026 ರ ವೇಳೆಗೆ ರಾಜ್ಯ ಮಟ್ಟದ ಗ್ರಾಂಡ್ ಫಿನಾಲೆ ನಡೆಯಲಿದೆ.
 
 
ಅಡುಗೆ ಮನೆ ಸೂಪರ್‌ಸ್ಟಾರ್ ಬಗ್ಗೆ:
 
4 / 4
ಅಡುಗೆ ಮನೆ ಸೂಪರ್‌ಸ್ಟಾರ್ ಕರ್ನಾಟಕದ ಅಡುಗೆಮನೆ ಪರಂಪರೆಯನ್ನು ಆಚರಿಸುವ ಸಮುದಾಯ-ಕೇಂದ್ರಿತ ಅಡುಗೆ ಮನೆಯ ಒಂದು ಸ್ಪರ್ಧೆ-ಪ್ರದರ್ಶನವಾಗಿದೆ.   ಈ ನೆಲದ  ಅಮೂಲ್ಯವಾದ ಪಾಕವಿಧಾನಗಳು, ಅಡುಗೆ ಕಲೆ,  ಮತ್ತು ಒಲೆಯ ಸುತ್ತ ರೂಪುಗೊಳ್ಳುವ  ಸಂಬಂಧಗಳನ್ನು ಇದು ಸಂಭ್ರಮಿಸಲಿದೆ.   ನೆರೆಹೊರೆಯ ಸೌಹಾರ್ಧ  ಸಂಬಂಧದ  ಮನೋಭಾವವನ್ನು ಪುನರುಜ್ಜೀವನಗೊಳಿಸುವುದು, ಪ್ರಾದೇಶಿಕ ಆಹಾರ ಪದ್ದತಿಗಳನ್ನು ಜನಪ್ರಿಯಗೊಳಿಸುವುದು, ಮತ್ತು ವೈವಿಧ್ಯಮಯ  ಅಡುಗೆ ಮತ್ತು ಅಡುಗೆ ಮನೆ  ಸಂಭಾಷಣೆಯ ಮೂಲಕ ಸಂಪರ್ಕ ಸಾಧಿಸಬಹುದಾದ  ವೇದಿಕೆಯನ್ನು ಸೃಷ್ಟಿಸುವುದು ಈ  ಕಾರ್ಯಕ್ರಮದ ಉದ್ದೇಶವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಇಂದು, ನಾಳೆ ಈ ಜಿಲ್ಲೆಗಳಿಗೆ ಭಾರೀ ಮಳೆ