Select Your Language

Notifications

webdunia
webdunia
webdunia
webdunia

ಸೌಜನ್ಯ ಘಟನೆ ನಡೆದಾಗ ನಿಮ್ಮ ಸರ್ಕಾರವೇ ಇದ್ದಿದ್ದು: ಬಿವೈ ವಿಜಯೇಂದ್ರಗೆ ನೆಟ್ಟಿಗರ ತರಾಟೆ

BY Vijayendra

Krishnaveni K

ಬೆಳ್ತಂಗಡಿ , ಮಂಗಳವಾರ, 2 ಸೆಪ್ಟಂಬರ್ 2025 (14:27 IST)

ಬೆಳ್ತಂಗಡಿ: ಧರ್ಮಸ್ಥಳದ ಸೌಜನ್ಯ ಮನೆಗೆ ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭೇಟಿ ನೀಡಿದ್ದನ್ನು ನೆಟ್ಟಿಗರು ಟೀಕಿಸಿದ್ದಾರೆ. ಅಂದು ಪ್ರಕರಣ ನಡೆದಾಗಲೂ ನಿಮ್ಮ ಸರ್ಕಾರವೇ ಇದ್ದಿದ್ದು ಎಂದಿದ್ದಾರೆ.

ಸೌಜನ್ಯ ಮನೆಗೆ ಭೇಟಿ ನೀಡಿದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ವಿಜಯೇಂದ್ರ ನಿಮ್ಮೊಂದಿಗೆ ನಾವಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಇನ್ನಿಲ್ಲದಂತೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಂದು ಪ್ರಕರಣ ನಡೆದಾಗಲೂ ನಿಮ್ಮ ಸರ್ಕಾರವೇ ಇತ್ತು, ನಿಮ್ಮ ತಂದೆಯವರೇ ಸಿಎಂ ಆಗಿದ್ರು. ಆಗ ಏನಾದ್ರೂ ಮಾಡಿದ್ರೆ ಈವತ್ತು ಈ ಸ್ಥಿತಿ ಬರುತ್ತಿರಲಿಲ್ಲ. ನಿಮ್ಮ ತಂದೆಯವರಿಂದಲೇ ಆ ಹುಡುಗಿಗೆ ಅನ್ಯಾಯ ಆಗಿದ್ದು. ಈಗ ನ್ಯಾಯ ಕೊಡಿಸಿ ಎಂದು ಕಿಡಿ ಕಾರಿದ್ದಾರೆ.

ಮತ್ತೆ ಕೆಲವರು ನೀವೇ ಪ್ರಕರಣ ಮುಚ್ಚಿ ಹಾಕಿ ಈಗ ಬೀದಿ ನಾಟಕ ಮಾಡ್ತಿದ್ದೀರಾ? ನಿಮ್ಮ ರಾಜಕೀಯಕ್ಕೆಲ್ಲಾ ನಾವು ಜೊತೆ ನಿಲ್ಲಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ದಿವಾನ್ ಮಿರ್ಜಾ ಇಸ್ಮಾಯಿಲ್ ಮಹಾರಾಜರನ್ನು ಮೆರವಣಿಗೆ ಮಾಡಿಸ್ತಿದ್ರು: ಸಿದ್ದರಾಮಯ್ಯ