Select Your Language

Notifications

webdunia
webdunia
webdunia
webdunia

ಕಾಲಿಫ್ಲವರ್ ನಿಂದ ಹುಳವೆಲ್ಲಾ ತೆಗೆದು ಕ್ಲೀನ್ ಮಾಡಲು ಇದು ಬೆಸ್ಟ್ ಉಪಾಯ

Cauliflower

Krishnaveni K

ಬೆಂಗಳೂರು , ಶುಕ್ರವಾರ, 3 ಅಕ್ಟೋಬರ್ 2025 (10:32 IST)
ಕಾಲಿಫ್ಲವರ್ ತಿನ್ನಲು ಇಷ್ಟ. ಆದರೆ ಅದರಲ್ಲಿ ಹುಳ ಇದೆಯಲ್ಲಾ ಎಂದು ಹಿಂದೇಟು ಹಾಕುತ್ತಿದ್ದೀರಾ? ಹಾಗಿದ್ದರೆ ಹುಳವೆಲ್ಲಾ ತೆಗೆದು ಕಾಲಿಫ್ಲವರ್ ಕ್ಲೀನ್ ಮಾಡಲು ಇಲ್ಲಿದೆ ಟಿಪ್ಸ್.

ವಿಧಾನ 1
-ಕಾಲಿಫ್ಲವರ್ ನ್ನು ಮೊದಲು ಹೊರಾವರಣವನ್ನೆಲ್ಲಾ ತೆಗೆದು ಎಸಳುಗಳಾಗಿ ಮಾಡಿ
-ದೊಡ್ಡ ಬೌಲ್ ನಲ್ಲಿ ತಂಪು ನೀರು ಹಾಕಿ. ಇದಕ್ಕೆ 1 ರಿಂದ ಎರಡು ಸ್ಪೂನ್ ಉಪ್ಪು ಹಾಕಿ ಕರಗಿಸಿ
-ಈಗ ಕಾಲಿಫ್ಲವರ್ ಎಸಳುಗಳನ್ನು ಹಾಕಿ ಮೇಲಿನಿಂದ ಅದು ಮುಳುಗುವಂತೆ ಸಣ್ಣ ಪ್ಲೇಟ್ ಇಡಿ
-ಈಗ 5-10 ನಿಮಿಷ ನೆನೆಸಿಡಿ. ಬಳಿಕ ಶುದ್ಧ ನೀರಿನಿಂದ ತೊಳೆದು ನೀರು ಬಸಿದಿಡಿ.

ವಿಧಾನ2
-ಮೇಲೆ ಹೇಳಿದ ಅದೇ ವಿಧಾನದಲ್ಲಿ ಕಾಲಿಫ್ಲವರ್ ಎಸಳುಗಳಾಗಿ ಮಾಡಿ
-ಉಪ್ಪಿನ ಬದಲು ವಿನೇಗರ್ ಅರ್ಧಕಪ್ ಹಾಕಿ ದ್ರಾವಣ ರೆಡಿ ಮಾಡಿ
-ಇದರಲ್ಲಿ ಕಾಲಿಫ್ಲವರ್ ಮುಳುಗುವಂತೆ 10 ನಿಮಿಷ ನೆನೆಸಿಡಿ
-ಬಳಿಕ ಶುದ್ಧ ನೀರಿನಿಂದ ತೊಳೆದು ಬಳಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಗ್ರಾಸ್ಟ್ರಿಕ್ ಸಮಸ್ಯೆಗೆ ಅಯುಷ್ಯ ಮಂಡಲಂನ ಅನುಷ್ಕಾರ ಈ ವಿಧಾನ ಅನುಸರಿಸಿ