ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಅಂತಿಮ ದಿನ ಯಾವಾಗ ಇಲ್ಲಿದೆ ವಿವರ.
									
			
			 
 			
 
 			
					
			        							
								
																	ಪ್ರಯಾಗ್ ರಾಜ್ ಕುಂಭಮೇಳದಲ್ಲಿ ಇದುವರೆಗೆ ಕೋಟ್ಯಾಂತರ ಮಂದಿ ಪುಣ್ಯ ಸ್ನಾನ ಮಾಡಿದ್ದಾರೆ. ಅನೇಕ ಗಣ್ಯಾತಿಗಣ್ಯರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ ಪುನೀತರಾಗಿದ್ದಾರೆ. ಇದೀಗ ಕುಂಭಮೇಳ ಅಂತಿಮ ಘಟ್ಟಕ್ಕೆ ಬಂದಿದೆ.
									
										
								
																	ಮಹಾ ಶಿವರಾತ್ರಿಯಂದು ಫೆಬ್ರವರಿ 26 ಕ್ಕೆ ಮಹಾಕುಂಭಮೇಳಕ್ಕೆ ತೆರೆ ಬೀಳಲಿದೆ. 12 ವರ್ಷಗಳಿಗೊಮ್ಮೆ ನಡೆಯುವ ಕುಂಭಮೇಳ ಕೊನೆಯಾಗುತ್ತಿದೆ. ಈಗಲೂ ಪ್ರತಿನಿತ್ಯ ಅನೇಕರು ಬಂದು ಪುಣ್ಯ ಸ್ನಾನ ಮಾಡಿ ಹೋಗುತ್ತಿದ್ದಾರೆ.
									
											
							                     
							
							
			        							
								
																	ಜನವರಿ 13 ರಂದು ಕುಂಭಮೇಳ ಆರಂಭಗೊಂಡಿತ್ತು. ಫೆಬ್ರವರಿ 3 ರಂದು ಕೊನೆಯ ಅಮೃತ ಸ್ನಾನ ನಡೆದಿತ್ತು. ಇದೀಗ ಮಹಾ ಕುಂಭಮೇಳದ ಕೊನೆಯ ಪುಣ್ಯ ಸ್ನಾನ ಫೆಬ್ರವರಿ 26 ರಂದು ಮಹಾಶಿವರಾತ್ರಿಯಂದು ನಡೆಯಲಿದೆ.