ಮಧ್ಯಪ್ರದೇಶ: ಉತ್ತರ ಪ್ರದೇಶ ಪ್ರಯಾಗ್ ರಾಜ್ ನಲ್ಲಿ ಮಹಾ ಕುಂಭಮೇಳಕ್ಕೆ ಹೋಗಿ ವಾಪಸಾಗುವಾಗ ಮಧ್ಯಪ್ರದೇಶದಲ್ಲಿ ಭೀಕರ ಅಪಘಾತವೊಂದು ಸಂಭವಿಸಿದ್ದು ಕಾರಿನಲ್ಲಿದ್ದ 7 ಮಂದಿ ಸಾವನ್ನಪ್ಪಿದ್ದಾರೆ. ಈ ವಿಡಿಯೋದಲ್ಲಿ ಅಪಘಾತದ ತೀವ್ರತೆ ತಿಳಿಯಲಿದೆ.
ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಹೆದ್ದಾರಿಯಲ್ಲಿ ಇಂದು ಟೆಂಪೊ ಟ್ರಕ್ ಗೆ ಕಾರು ಢಿಕ್ಕಿಯಾಗಿದೆ. ಕಾರಿನಲ್ಲಿದ್ದ 7 ಮಂದಿ ಇಹಲೋಕ ತ್ಯಜಿಸಿದ್ದಾರೆ. ಈ ಭೀಕರ ಅಪಘಾತದಲ್ಲಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಅತ್ತ ಟ್ರಕ್ ಕೂಡಾ ಭಾಗಶಃ ಪುಡಿ ಪುಡಿಯಾಗಿದೆ. ಟ್ರಕ್ ಮತ್ತು ರಸ್ತೆಯ ತಡೆಗೋಡೆ ನಡುವೆ ಕಾರು ಸಿಲುಕಿದೆ. ಕೆಳಗೆ ನದಿಯಿದ್ದು ತಡೆಗೋಡೆಯಿದ್ದಿದ್ದರಿಂದ ಅಪಘಾತದ ತೀವ್ರತೆಯಿಂದ ಕಾರು ಕೆಳಗೆ ಬಿದ್ದಿರಲಿಲ್ಲ.
ಮೃತರೆಲ್ಲರೂ ಆಂಧ್ರಪ್ರದೇಶದವರು ಎಂದು ತಿಳಿದುಬಂದಿದೆ. ಎಲ್ಲರೂ ಮಹಾಕುಂಭಮೇಳದಲ್ಲಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ ಬರುತ್ತಿದ್ದರು. ಬರುವಾಗಲೇ ಅಪಘಾತ ಸಂಭವಿಸಿ ಪ್ರಾಣ ಬಿಡುವಂತಾಗಿದ್ದು ವಿಪರ್ಯಾಸ.