Select Your Language

Notifications

webdunia
webdunia
webdunia
webdunia

Madhya Pradesh: ಮದುವೆ ಹಿಂದಿನ ದಿನ ಪೊಲೀಸರ ಎದುರೇ ಮದುಮಗಳನ್ನುಗುಂಡಿಕ್ಕಿ ಕೊಂದ ತಂದೆ

Crime

Krishnaveni K

ಗ್ವಾಲಿಯರ್ , ಬುಧವಾರ, 15 ಜನವರಿ 2025 (15:08 IST)
ಗ್ವಾಲಿಯರ್: ಮದುವೆ ಹಿಂದಿನ ದಿನ ಪೊಲೀಸರ ಎದುರೇ ಮದುಮಗಳನ್ನು ತಂದೆಯೇ ಗುಂಡಿಕ್ಕಿ ಕೊಂದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ. ಅಷ್ಟಕ್ಕೂ ತಂದೆ ಇಂತಹದ್ದೊಂದು ಕೃತ್ಯವೆಸಗಿದ್ದು ಯಾಕೆ?

20 ವರ್ಷದ ಯುವತಿಗೆ ಮದುವೆ ನಿಶ್ಚಿಯವಾಗಿತ್ತು. ಎಲ್ಲಾ ಸರಿ ಹೋಗಿದ್ದರೆ ಇಂದು ಆಕೆಯ ಮದುವೆಯಾಗಬೇಕಿತ್ತು. ಆದರೆ ನಿನ್ನೆ ಪೊಲೀಸರ ಎದುರೇ ವಧುವಿಗೆ ಆಕೆಯ ತಂದೆ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಇದಕ್ಕೆ ವಧುವಿಗೆ ಬೇರೊಬ್ಬ ಯುವಕನೊಂದಿಗಿದ್ದ ಅಫೇರ್ ಕಾರಣ.

ಮದುವೆಗೆ ಕೆಲವೇ ಕ್ಷಣಗಳಿರುವಾಗ ವಧು ತನ್ನ ಪ್ರಿಯಕರನೊಂದಿಗಿರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಳು. ಇದನ್ನು ಕಂಡು ತಂದೆ ಸಿಟ್ಟಿಗೆದ್ದಿದ್ದು ಮಗಳನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಸಾರ್ವಜನಿಕವಾಗಿಯೇ ಆಕೆ ತನಗೆ ನೀವು ನಿಶ್ಚಯ ಮಾಡಿರುವ ಮದುವೆ ಇಷ್ಟವಿಲ್ಲ. ಬೇರೊಬ್ಬನನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದಳು.

ಬಳಿಕ ಮನೆಯಿಂದ ಹೊರಬಂದಿದ್ದ ಆಕೆ ಮಹಿಳೆಯರ ಸಹಾಯ ಕೇಂದ್ರ ಸೇರಿಕೊಂಡಿದ್ದಳು. ಅಲ್ಲಿಗೆ ಸಂಧಾನ ಮಾಡುವ ನೆಪದಲ್ಲಿ ಬಂದಿದ್ದ ತಂದೆ, ಪೊಲೀಸರು ಅಲ್ಲಿರುವಾಗ ಅವರ ಎದುರೇ ಕಂಟ್ರಿಮೇಡ್ ಪಿಸ್ತೂಲ್ ನಿಂದ ತೀರಾ ಹತ್ತಿರದಿಂದಲೇ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಇದೀಗ ಆರೋಪಿ ತಂದೆಯನ್ನು ಅರೆಸ್ಟ್ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ವಿರುದ್ಧ ಹೋರಾಡಬೇಕಿದೆ: ಮೋಹನ್ ಭಾಗವತ್ ಅರೆಸ್ಟ್ ಆಗಬೇಕಿತ್ತು ಎಂದ ರಾಹುಲ್ ಗಾಂಧಿ (Video)