Select Your Language

Notifications

webdunia
webdunia
webdunia
webdunia

ಆರು ಮಕ್ಕಳ ತಾಯಿಗೆ ಭಿಕ್ಷುಕನೊಂದಿಗೆ ಬೆಳೆಯಿತು ಲವ್ವು, ಆಮೇಲೇನಾಯ್ತು ನೋಡಿ

Arrest

Krishnaveni K

ಲಕ್ನೋ , ಬುಧವಾರ, 8 ಜನವರಿ 2025 (10:07 IST)
ಲಕ್ನೋ: ಆರು ಮಕ್ಕಳ ತಾಯಿಗೆ ತನ್ನ ಮನೆಗೆ ದಿನಾ ಭಿಕ್ಷೆ ಬೇಡಲು ಬರುತ್ತಿದ್ದವನ ಮೇಲೆಯೇ ಪ್ರೇಮಾಂಕುರವಾಯಿತು. ಮುಂದೇನಾಯ್ತು ಇಲ್ಲಿ ನೋಡಿ.

ಉತ್ತರ ಪ್ರದೇಶದ ಹರ್ದೋಯ್ ನಲ್ಲಿ ಈ ಘಟನೆ ನಡೆದಿದೆ. 36 ವರ್ಷದ ರಾಜೇಶ್ವರಿ ಎಂಬ ಮಹಿಳೆ ಆರು ಮಕ್ಕಳ ತಾಯಿ. ತನ್ನ ಗಂಡ, ಮಕ್ಕಳೊಂದಿಗೆ ಆರಾಮವಾಗಿದ್ದಳು. ಆದರೆ ಈಗ ಅದೇನಾಗಿ ಹೋಯ್ತೋ, ತನ್ನ ಮನೆಗೆ ಭಿಕ್ಷೆ ಬೇಡಲು ಬರುತ್ತಿದ್ದ ಭಿಕ್ಷುಕನೊಂದಿಗೇ ಪರಾರಿಯಾಗಿದ್ದಾಳೆ.

ಪತಿ ಎಮ್ಮೆ ಮಾರಿ ಕೂಡಿಟ್ಟಿದ್ದ ಹಣದ ಸಮೇತ ರಾಜೇಶ್ವರಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಗಾಬರಿಯಾದ ಗಂಡ ಪೊಲೀಸರಿಗೆ ದೂರು ಕೊಟ್ಟಿದ್ದ. ತನ್ನ ಪತ್ನಿಯನ್ನು ಯಾರಾದರೂ ಅಪಹರಿಸಿರಬಹುದೇ ಎಂದು ಸಂಶಯಪಟ್ಟಿದ್ದ. ಆದರೆ ತನಿಖೆ ನಡೆಸಿದ ಪೊಲೀಸರಿಗೆ ನಿಜ ಸಂಗತಿ ಗೊತ್ತಾಗಿತ್ತು.

ನನ್ಹೇ ಪಂಡಿತ್ ಎಂಬ ಹೈಟೆಕ್ ಭಿಕ್ಷಕನೊಂದಿಗೆ ರಾಜೇಶ್ವರಿ ಓಡಿ ಹೋಗಿದ್ದಳು. ಭಿಕ್ಷೆ ಬೇಡುವ ನೆಪದಲ್ಲಿ ಆಗಾಗ ಮನೆಗೆ ಬರುತ್ತಿದ್ದ. ಭಿಕ್ಷೆ ಬೇಡಿಯೇ ಸಾಕಷ್ಟು ಹಣ ಗಳಿಸಿಕೊಂಡಿದ್ದ. ಭಿಕ್ಷಕನ ಮೊಬೈಲ್ ನಂಬರ್ ಪಡೆದುಕೊಂಡು ಮಾತುಕತೆಯೂ ನಡೆಯುತ್ತಿತ್ತು ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಇದೀಗ ಭಿಕ್ಷುಕ ಮತ್ತು ಮಹಿಳೆ ಮೇಲೆ ಪೊಲೀಸರು ಅಕ್ರಮ ಸಂಬಂಧ ಕೇಸ್ ದಾಖಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಬರಬೇಕೆಂದರೆ ಇದೊಂದು ಕೆಲಸ ತಪ್ಪದೇ ಮಾಡಬೇಕು