ನವದೆಹಲಿ: ಪೂರ್ವ ದೆಹಲಿಯ ಶಕರ್‌ಪುರದ ಸರಕಾರಿ ಶಾಲೆಯೊಂದರ ಹೊರಗೆ ಒಂಬತ್ತನೇ ತರಗತಿಯ ವಿದ್ಯಾರ್ಥಿಯನ್ನು ಆತನ ಸಹಪಾಠಿಗಳೇ ಹೊಡೆದು ಕೊಂದಿರುವ ಭಯಾನಕ ಘಟನೆ ಇಂದು ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಶಾಲೆಯಲ್ಲಿ ಇಬ್ಬರು ಸಹಪಾಠಿಗಳ ನಡುವಿನ ಜಗಳದಿಂದ ಕೊಲೆ ನಡೆದಿದೆ ಎನ್ನಲಾಗಿದೆ.
ಒಂಬತ್ತನೇ ತರಗತಿಯ ವಿದ್ಯಾರ್ಥಿಯ ಮೇಲೆ ವ್ಯಕ್ತಿಗಳ ಗುಂಪೊಂದು ಶಾಲೆಯ ಗೇಟ್‌ನ ಹೊರಗೆ ಹಲ್ಲೆ ನಡೆಸಿದೆ. ವಿದ್ಯಾರ್ಥಿಗಳು ಕ್ಯಾಂಪಸ್‌ನಿಂದ ನಿರ್ಗಮಿಸುವಾಗ ಎರಡು ಗುಂಪಿನ ಮಧ್ಯೆ ಜಗಳ ನಡೆದಿದೆ. ಬಾಲಕ ಶಾಲೆಯಿಂದ ಹೊರಗೆ ಬರುತ್ತಿರುವುದನ್ನು ಕಾದು ಕುಳಿತ ಒಂದು ತಂಡದವರು ಹೊರಬರುತ್ತಿದ್ದ ಹಾಗೇ ಹಲ್ಲೆ ಮಾಡಿದ್ದಾರ.
ಬಲತೊಡೆಗೆ ಚಾಕುವಿನಿಂದ ಇರಿದು ತೀವ್ರ ಗಾಯಗೊಳಿಸಿದ್ದಾನೆ. ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ.