Select Your Language

Notifications

webdunia
webdunia
webdunia
webdunia

ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಬರಬೇಕೆಂದರೆ ಇದೊಂದು ಕೆಲಸ ತಪ್ಪದೇ ಮಾಡಬೇಕು

Gruhalakshmi

Krishnaveni K

ಬೆಂಗಳೂರು , ಬುಧವಾರ, 8 ಜನವರಿ 2025 (09:19 IST)
ಬೆಂಗಳೂರು: ನೀವು ಗೃಹಲಕ್ಷ್ಮಿ ಫಲಾನುಭವಿಗಳಾಗಿದ್ದರೂ ನಿಮ್ಮ ಖಾತೆಗೆ ಹಣ ಜಮೆಯಾಗುತ್ತಿಲ್ಲವೆಂದರೆ ಈ ಒಂದು ಕೆಲಸವನ್ನು ತಪ್ಪದೇ ಮಾಡಬೇಕು. ಅದೇನು ಇಲ್ಲಿ ನೋಡಿ.

ಗೃಹಲಕ್ಷ್ಮಿ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಡಿ ಮನೆಯ ಯಜಮಾನಿ ಬ್ಯಾಂಕ್ ಖಾತೆಗೆ ಸರ್ಕಾರ ಪ್ರತೀ ತಿಂಗಳು 2,000 ರೂ. ಜಮೆ ಮಾಡುತ್ತದೆ. ಇದುವರೆಗೆ ಒಟ್ಟು 15 ಕಂತಿನ ಹಣ ಜಮೆಯಾಗಿದೆ. ಇನ್ನೀಗ 16 ನೇ ಕಂತಿನ ಹಣ ಬಿಡುಗಡೆಯಾಗಬೇಕಿದೆ.

16 ನೇ ಕಂತು ಬಿಡುಗಡೆಯಾಗಲು ಇನ್ನೇನು ಕೆಲವೇ ದಿನ ಬಾಕಿಯಿದ್ದು ಇದಕ್ಕೆ ಮೊದಲು ನಿಮ್ಮ ಖಾತೆಗೆ ಹಣ ಸಂದಾಯವಾಗಬೇಕಾದರೆ ಈ ಎರಡು ಕೆಲಸವನ್ನು ತಪ್ಪದೇ ಮಾಡಬೇಕು. ಅದೇನೆಂದರೆ ಕೆವೈಸಿ ಅಪ್ ಡೇಟ್ ಮತ್ತು ಆಧಾರ್ ಲಿಂಕ್.

ಮನೆಯ ಯಜಮಾನಿ ಖಾತೆಗೆ ಗೃಹಲಕ್ಷ್ಮಿ ಹಣ ಸಂದಾಯವಾಗುತ್ತದೆ. ಫಲಾನುಭವಿಗಳು ಈ ಖಾತೆಗೆ ಆಧಾರ್ ಲಿಂಕ್ ಮಾಡಿಸಬೇಕು ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಬೇಕು. ಇದರ ಜೊತೆಗೆ ಬ್ಯಾಂಕ್ ಇ-ಕೆವೈಸಿ ಅಪ್ ಡೇಟ್ ಮಾಡಿಸುವುದು ಕಡ್ಡಾಯವಾಗಿದೆ. ಇವಿಷ್ಟು ಕೆಲಸ ಮಾಡದೇ ಇದ್ದರೆ ಮುಂದಿನ ಕಂತಿನ ಹಣ ಫಲಾನುಭವಿಗಳಾಗಿದ್ದರೂ ಜಮೆ ಆಗದು. ಹೀಗಾಗಿ ಇದನ್ನು ಮಾಡಿಸದೇ ಇದ್ದವರು ತಕ್ಷಣವೇ ಮಾಡಿಸಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

Gruhalakshmi: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಈ ದಿನ ಖಾತೆ ಚೆಕ್ ಮಾಡಿ ನೋಡಿ