Select Your Language

Notifications

webdunia
webdunia
webdunia
webdunia

ಕೌಟುಂಬಿಕ ಕಲಹಕ್ಕೆ ತಾಯಿ ಸೇರಿದಂತೆ ನಾಲ್ವರು ಸಹೋದಿಯರನ್ನು ಕೊಂದ ಸಹೋದರ

Hotel Sharan Jeet,  Deputy Commissioner of Police Raveena Tyagi, Agra Dangerous Crime Casem

Sampriya

ಲಕ್ನೋ , ಬುಧವಾರ, 1 ಜನವರಿ 2025 (17:29 IST)
ಲಕ್ನೋ:  ಆಗ್ರಾದ ಹೋಟೆಲ್ ಶರಣ್ ಜೀತ್‌ನಲ್ಲಿರುವ ಕೋಣೆಯಲ್ಲಿ ತಾಯಿ ಮತ್ತು ಅವರು ನಾಲ್ಕು ಹೆಣ್ಣು ಮಕ್ಕಳ ಮೃತದೇಹ ಪತ್ತೆಯಾಗಿದೆ.

ಇದೀಗ ಈ ಸಂಬಂದ ಆಗ್ರಾದ ಅರ್ಷದ್ (24) ಎಂಬಾತನನ್ನು ಬಂಧಿಸಲಾಗಿದೆ.  ಸಂತ್ರಸ್ತರು ಡಿಸೆಂಬರ್ 30 ರಂದು ಚೆಕ್ ಇನ್ ಮಾಡಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಮೃತರನ್ನು ಮೂವರು ಸಹೋದರಿಯರಾದ ಅಲಿಯಾ (9), ಅಲ್ಸಿಹಾ (19), ಅಕ್ಸಾ (16), ರೆಹಮೀನ್ (18) ಮತ್ತು ಅಸ್ಮಾ ಅವರ ತಾಯಿ ಎಂದು ಗುರುತಿಸಲಾಗಿದೆ.

ಎಎನ್‌ಐ ಜೊತೆ ಮಾತನಾಡಿದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ರವೀನಾ ತ್ಯಾಗಿ, "ಇಂದು, ಹೋಟೆಲ್ ಶರಣ್ ಜೀತ್‌ನ ಕೋಣೆಯಲ್ಲಿ ಐವರ ಶವಗಳು ಪತ್ತೆಯಾಗಿವೆ, ಸ್ಥಳೀಯ ಪೊಲೀಸರು ಸ್ಥಳಕ್ಕೆ ತಲುಪಿದರು, ಮತ್ತು ಅರ್ಷದ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದರು.

ಪ್ರಾಥಮಿಕ ವಿಚಾರಣೆಯಲ್ಲೇ ಕೌಟುಂಬಿಕ ಕಲಹದಿಂದ ತನ್ನ ನಾಲ್ವರು ಸಹೋದರಿಯರು ಹಾಗೂ ತಾಯಿಯನ್ನು ಕೊಂದಿರುವುದಾಗಿ ಆತ ಹೇಳಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಡಿಸಿಪಿ ತ್ಯಾಗಿ ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಜಂಟಿ ಸಿಪಿ ಬಬ್ಲೂ ಕುಮಾರ್, ನಾಲ್ಕು ಹುಡುಗಿಯರು ಮತ್ತು ಅವರ ತಾಯಿಯ 5 ಜನರ ಶವಗಳು ಪತ್ತೆಯಾಗಿವೆ, ಅವರು ಡಿಸೆಂಬರ್ 30 ರಂದು ಇಲ್ಲಿಗೆ ಬಂದಿದ್ದರು, ಮತ್ತು ಅವರ ಸಹೋದರ ಮತ್ತು ತಂದೆ ಸಹ ಅಲ್ಲಿದ್ದರು ಎಂದು ಹೋಟೆಲ್ ಸಿಬ್ಬಂದಿ ಹೇಳಿದರು. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಕುರ್ಚಿ ದಕ್ಕಿಸಿಕೊಳ್ಳುವ ತವಕದಲ್ಲಿರುವ ಡಿಕೆಶಿಗೆ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೇಳುವ ತಾಕತ್ತಿಲ್ಲ: ಆರ್ ಅಶೋಕ್