Select Your Language

Notifications

webdunia
webdunia
webdunia
webdunia

ಕಾರು ಗುದ್ದಿದ್ದಕ್ಕೆ ನಾಯಿ ರಿವೆಂಜ್ ತೆಗೆದುಕೊಂಡ ಪರಿ ಇದು: ವಿಡಿಯೋ ನೋಡಿ

Dog

Krishnaveni K

ಮಧ್ಯಪ್ರದೇಶ , ಬುಧವಾರ, 22 ಜನವರಿ 2025 (16:41 IST)
Photo Credit: X
ಮಧ್ಯಪ್ರದೇಶ: ಸಾಮಾನ್ಯವಾಗಿ ಹಾವಿನ ಧ್ವೇಷ ಹನ್ನೆರಡು ವರುಷ ಎನ್ನಲಾಗುತ್ತದೆ. ಆದರೆ ಇಲ್ಲಿ ನಾಯಿ ಅದನ್ನು ಸುಳ್ಳು ಮಾಡಿ ತನ್ನದೂ ಧ್ವೇಷ ಎಂದರೆ ಸುಮ್ಮನೇ ಅಲ್ಲ ಎಂದು ಸಾಬೀತು ಮಾಡಿದೆ.

ತನ್ನನ್ನು ಗುದ್ದಿದ ಕಾರಿನ ಮೇಲೆ ನಾಯಿ ರಿವೆಂಜ್ ತೆಗೆದುಕೊಳ್ಳುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದಕ್ಕೆ ಸಾಕಷ್ಟು ಜನ ಕಾಮೆಂಟ್ ಮಾಡುತ್ತಿದ್ದಾರೆ. ನಾಯಿಯ ಧ್ವೇಷವೂ ಸಾಮಾನ್ಯದ್ದಲ್ಲ ಎನ್ನುತ್ತಿದ್ದಾರೆ.

ಸಾಗರ್ ನ ತಿರುಪತಿ ಪುರಂ ಕಾಲೊನಿಯ ನಿವಾಸಿ ಪ್ರಹ್ಲಾದ್ ಸಿಂಗ್ ಎನ್ನುವವರು ತಮ್ಮ ಕುಟುಂಬದ ಜೊತೆ ಮಧ್ಯಾಹ್ನದ ಹೊತ್ತಿಗೆ ಮದುವೆಯೊಂದನ್ನು ಮುಗಿಸಿ ಮನೆಗೆ ಬರುತ್ತಿದ್ದರು. ಈ ವೇಳೆ ನಾಯಿಯೊಂದು ಅಡ್ಡಬಂದು ಕಾರು ಗುದ್ದಿತ್ತು. ಆಗ ನಾಯಿ ಬೊಗಳಿ ದೂರ ಓಡಿ ಹೋಗಿತ್ತು.

ವಿಶೇಷವೆಂದರೆ ಅದೇ ದಿನ ಮಧ್ಯರಾತ್ರಿ ಅದೇ ನಾಯಿ ಮನೆಯ ಬಳಿ ಕಾರು ನಿಲ್ಲಿಸಿದ್ದ ಜಾಗಕ್ಕೆ ಬಂದಿದೆ. ಅದೂ ಇನ್ನೊಂದು ನಾಯಿಯನ್ನು ಜೊತೆಗೆ ಕರೆತಂದಿದೆ. ಬಳಿಕ ತನಗೆ ಗುದ್ದಿದ ಕಾರನ್ನು ಮೂಸಿ ನೋಡಿ ಸ್ಕ್ರಾಚ್ ಮಾಡಿ ತೆರಳಿದೆ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳಿಕ ಮಾಲಿಕನಿಗೆ ಕಾರು ಸರಿ ಮಾಡಲು 15 ಸಾವಿರ ರೂ. ಖರ್ಚಾಗಿದೆಯಂತೆ!



Share this Story:

Follow Webdunia kannada

ಮುಂದಿನ ಸುದ್ದಿ

ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳದಲ್ಲಿ ಮಹಾಪ್ರಸಾದ ಬಡಿಸಿ ಸುಧಾ ಮೂರ್ತಿ ಹೇಳಿದ್ದೇನು