ಬೆಂಗಳೂರು: ಪ್ರಯಾಗ್ ರಾಜ್ ಮಹಾಕುಂಭಮೇಳಕ್ಕೆ ಹೋಗಿ ಪುಣ್ಯಸ್ನಾನ ಮಾಡಿದವರು ಕಾಶಿಗೆ ಹೋಗಿ ಪುಣ್ಯಸ್ನಾನ ಮಾಡಬಾರದೇ? ನಾಗಸಾಧುವೊಬ್ಬರು ನೀಡಿರುವ ವಿವರಣೆಯೊಂದರ ವಿಡಿಯೋ ಇಲ್ಲಿದೆ ನೋಡಿ.
ಫೇಸ್ ಬುಕ್ ಬಳಕೆದಾರರೊಬ್ಬರು ನಾಗಸಾಧುವೊಬ್ಬರು ಕಾಶಿ ಮತ್ತು ಕುಂಭಮೇಳ ಪುಣ್ಯ ಸ್ನಾನದ ಬಗ್ಗೆ ಮಾತನಾಡಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ನಾಗಸಾಧುವೊಬ್ಬರು ಅಚ್ಚ ಕನ್ನಡದಲ್ಲಿ ಕುಂಭಮೇಳ ಪುಣ್ಯಸ್ನಾನದ ಬಗ್ಗೆ ವಿವರಣೆ ನೀಡಿದ್ದಾರೆ.
ಕಾಶಿ ಮತ್ತು ಪ್ರಯಾಗ್ ರಾಜ್ ಉತ್ತರ ಪ್ರದೇಶದಲ್ಲಿಯೇ ಇದೆ. ಪ್ರಯಾಗ್ ರಾಜ್ ಗೆ ಹೋದವರು ಕಾಶಿಗೆ ಭೇಟಿ ನೀಡುತ್ತಿದ್ದಾರೆ. ಇದು ಸರಿಯೇ ಎಂಬ ಬಗ್ಗೆ ನಾಗಸಾಧುವೊಬ್ಬರು ವಿವರಣೆ ನೀಡಿದ್ದಾರೆ. ಪ್ರಯಾಗ್ ರಾಜ್ ಕುಂಭಮೇಳದಲ್ಲಿ ಈಗಾಗಲೇ ಹಲವರು ಕರ್ನಾಟಕದಿಂದ ಹೋಗಿ ಪುಣ್ಯ ಸ್ನಾನ ಮಾಡಿಕೊಂಡು ಬಂದಿದ್ದಾರೆ.
ಕಾಶಿಯಲ್ಲಿ ನಮ್ಮ ಪೂರ್ವಜರಿಗೆ ಮೋಕ್ಷ ಸಿಗಲು ನಾವು ಪುಣ್ಯಸ್ನಾನ ಮಾಡುತ್ತೇವೆ. ಮತ್ತು ಪ್ರಯಾಗ್ ರಾಜ್ ಕುಂಭಮೇಳದಲ್ಲಿ ಪಾಪ ಕಳೆಯಲು ಪುಣ್ಯ ಸ್ನಾನ ಮಾಡುತ್ತೇವೆ. ಮೊದಲು ಕಾಶಿಗೆ ಹೋಗಬೇಕೇ, ಕುಂಭಮೇಳಕ್ಕೆ ಬರಬೇಕೇ ಅವರೇ ಹೇಳಿದ್ದಾರೆ ನೋಡಿ.