ಬೆಂಗಳೂರು: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ ಡಿಸಿಎಂ ಡಿಕೆ ಶಿವಕುಮಾರ್ ರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ನಿಮ್ಮ ಬಾಸ್ ಖರ್ಗೆ ಕುಂಭಮೇಳಕ್ಕೆ ಬೈದ್ರು ನೀವು ನೋಡಿದ್ರೆ ಸ್ನಾನ ಮಾಡುತ್ತಿದ್ದೀರೀ ಎಂದಿದ್ದಾರೆ.
ದೆಹಲಿ ಚುನಾವಣೆ ಪ್ರಚಾರದ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಂಭಮೇಳಕ್ಕೆ ಹೋದರೆ ಪಾಪ ಕಳೆಯಲ್ಲ, ಗಂಗಾ ನದಿಯಲ್ಲಿ ಮುಳುಗಿ ಎದ್ದರೆ ಬಡತನ ನಿವಾರಣೆಯಾಗಲ್ಲ ಎಂದು ವ್ಯಂಗ್ಯ ಮಾಡಿದ್ದರು. ಹೀಗಾಗಿ ಈಗ ಅದೇ ಪಕ್ಷದವರಾದ ಡಿಕೆ ಶಿವಕುಮಾರ್ ಕುಂಭಮೇಳಕ್ಕೆ ಹೋಗಿದ್ದರೆ ಸಾಕಷ್ಟು ಜನ ವ್ಯಂಗ್ಯ ಮಾಡಿದ್ದಾರೆ.
ಬಿಜೆಪಿ ನಾಯಕರೂ ಡಿಕೆಶಿಗೆ ಟಾಂಗ್ ಕೊಟ್ಟಿದ್ದರು. ಇದಕ್ಕೆಲ್ಲಾ ಉತ್ತರಿಸಿದ್ದ ಡಿಕೆಶಿ ನನ್ನ ನಂಬಿಕೆ ನನ್ನದು. ಅಷ್ಟಕ್ಕೂ ಕುಂಭಮೇಳ ಯಾವುದೇ ಪಕ್ಷಕ್ಕೆ ಸೇರಿದ್ದಲ್ಲ ಎಂದಿದ್ದರು. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಕುಂಭಮೇಳದ ವಿಡಿಯೋ ಹಂಚಿಕೊಂಡಿರುವುದಕ್ಕೆ ಅವರು ಟ್ರೋಲ್ ಆಗಿದ್ದಾರೆ.
ನಿಮ್ಮ ಬಾಸ್ ಖರ್ಗೆ ನೋಡಿದ್ರೆ ಕುಂಭಮೇಳಕ್ಕೆ ಬೈತಾರೆ. ಈಗ ನೀವು ಮುಳುಗು ಹಾಕಿರುವ ವಿಡಿಯೋವನ್ನು ನಿಮ್ಮ ಬಾಸ್ ಗೆ ಕಳುಹಿಸಿಕೊಡಿ ಎಂದು ಕೆಲವರು ಕಾಲೆಳೆದರೆ ಮತ್ತೆ ಕೆಲವರು ಬಹುಶಃ ನಿಮ್ಮಂತೆ ವಿರೋಧ ಪಕ್ಷದವರೂ ನಿಮ್ಮ ನಾಯಕರಿಗೆ ಟಾಂಗ್ ಕೊಡಲ್ಲ ಎಂದು ಕಾಲೆಳೆದಿದ್ದಾರೆ.