Select Your Language

Notifications

webdunia
webdunia
webdunia
webdunia

ಕುಂಭಮೇಳ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಪ್ರಧಾನಿ ಮೋದಿ: ವಿಡಿಯೋ

Modi Kumbhmela

Krishnaveni K

ಪ್ರಯಾಗ್ ರಾಜ್ , ಬುಧವಾರ, 5 ಫೆಬ್ರವರಿ 2025 (11:57 IST)
Photo Credit: X
ಪ್ರಯಾಗ್ ರಾಜ್: ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಇಂದು ಪ್ರಧಾನಿ ಮೋದಿ ಪುಣ್ಯ ಸ್ನಾನ ಮಾಡಿದ್ದಾರೆ. ಪುಣ್ಯಸ್ನಾನ ಮಾಡಿ ಗಂಗಾ, ಯಮುನಾ ನದಿಗೆ ನಮಸ್ಕರಿಸಿದ್ದಾರೆ.

ಇಂದು ಮೊದಲ ಬಾರಿಗೆ ಕುಂಭಮೇಳಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಾಥ್ ಕೊಟ್ಟಿದ್ದಾರೆ. ಕೆಂಪು ವಸ್ತ್ರ, ರುದ್ರಾಕ್ಷಿ ಧರಿಸಿ ತ್ರಿವೇಣಿ ಸಂಗಮದಲ್ಲಿ ಮೋದಿ ಮುಳುಗೆದ್ದಿದ್ದಾರೆ.

ಕೆಲವು ಹೊತ್ತು ನದಿ ನೀರಿನಲ್ಲಿ ನಿಂತು ರುದ್ರಾಕ್ಷಿ ಸರ ಹಿಡಿದು ಜಪ ಮಾಡಿದ್ದಾರೆ. ಬಳಿಕ ಪುಣ್ಯ ನದಿಗೆ ಅರ್ಘ್ಯ ಕೊಟ್ಟು ಪ್ರಾರ್ಥನೆ ಸಲ್ಲಿಸಿದ್ದಾರೆ. ಆರು ವರ್ಷಗಳ ನಂತರ ಇಂದು ತ್ರಿವೇಣಿ ಸಂಗಮದಲ್ಲಿ ಅವರು ಪುಣ್ಯಸ್ನಾನ ಮಾಡಿದರು.

ಮೋದಿ ಸ್ನಾನದ ವೇಳೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಗಂಗಾನದಿಗೆ ನಮಿಸಿದ ಬಳಿಕ ಮೋದಿ ಹೆಲಿಕಾಪ್ಟರ್ ಮೂಲಕ ನಿರ್ಗಮಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕುಂಭಮೇಳ ಕಾಲ್ತುಳಿತದಲ್ಲಿ ಮಡಿದವರ ಚಿನ್ನಾಭರಣಗಳೂ ಸುರಕ್ಷಿತವಾಗಿ ವಾಪಸ್: ಕುಟುಂಬಸ್ಥರ ಸ್ಪಷ್ಟನೆ