Select Your Language

Notifications

webdunia
webdunia
webdunia
webdunia

ಕುಂಭಮೇಳಕ್ಕೆ ಇಂದು ಹೋಗುವವರು ಈ ವಿಚಾರ ಗಮನಿಸಿ

Kumbhmela

Krishnaveni K

ಪ್ರಯಾಗ್ ರಾಜ್ , ಸೋಮವಾರ, 3 ಫೆಬ್ರವರಿ 2025 (08:43 IST)
ಪ್ರಯಾಗ್ ರಾಜ್: ಮಹಾಕುಂಭಮೇಳಕ್ಕೆ ಇಂದು ಹೋಗುವವರು ಇಂದಿನ ಪರಿಸ್ಥಿತಿ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಯಾಕೆಂದರೆ ಇಂದು ವಸಂತ ಪಂಚಮಿಯಾಗಿದ್ದು ಸಾಕಷ್ಟು ಜನರು ಸೇರುವ ನಿರೀಕ್ಷೆಯಿದೆ.

ಕಳೆದ ಬಾರಿ ಮೌನಿ ಅಮವಾಸ್ಯೆಯಂದು ವಿಪರೀತ ಜನ ದಟ್ಟಣೆಯಿಂದಾಗಿ ಕುಂಭಮೇಳದಲ್ಲಿ 30 ಭಕ್ತರು ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದರು. ಇದರಲ್ಲಿ ಕರ್ನಾಟಕದ ನಾಲ್ವರೂ ಸೇರಿದ್ದರು. ಇಂದು ವಸಂತ ಪಂಚಮಿ ನಿಮಿತ್ತ ಜನ ದಟ್ಟಣೆ ಕಂಡುಬರಲಿದೆ.

ವಸಂತ ಪಂಚಮಿ ನಿಮಿತ್ತ ಇಂದು ಶಾಹಿ ಸ್ನಾನ ನಡೆಯಲಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಪುಣ್ಯಸ್ನಾನಕ್ಕಾಗಿ ಬರಲಿದ್ದಾರೆ. ಈ ಸಂದರ್ಭದಲ್ಲಿ ನೂಕುನುಗ್ಗಲು ಸಹಜವಾಗಿದೆ. ಹೀಗಾಗಿ ಇಂದು ಕುಂಭಮೇಳಕ್ಕೆ ಬರುವ ಭಕ್ತರು ಇದನ್ನು ಗಮನದಲ್ಲಿಟ್ಟುಕೊಳ್ಳುವುದು ಉತ್ತಮ.

ಫೆಬ್ರವರಿ 26 ರವರೆಗೆ ಕುಂಭಮೇಳ ನಡೆಯಲಿದೆ. ಆದರೆ ವಿಶೇಷ ದಿನಗಳಂದು ಜನದಟ್ಟಣೆ ವಿಪರೀತವಾಗಿರುತ್ತದೆ. ಈ ಸಂದರ್ಭದಲ್ಲಿ ಮಕ್ಕಳು, ವಯೋವೃದ್ಧರು ಕುಂಭಮೇಳಕ್ಕೆ ಬರುವುದು ಅಷ್ಟು ಸುರಕ್ಷಿತವಲ್ಲ ಎನ್ನಬಹುದು. ಹೀಗಾಗಿ ಪರಿಸ್ಥಿತಿ ನೋಡಿಕೊಂಡು ಹೋದರೆ ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಬಹಿರಂಗ ಸಮಾವೇಶದಲ್ಲಿ ಡಿಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ