Select Your Language

Notifications

webdunia
webdunia
webdunia
Thursday, 27 February 2025
webdunia

Kumbhmela: ಕಾಲ್ತುಳಿತದ ಬಳಿಕ ಮಹಾಕುಂಭಮೇಳದಲ್ಲಿ ಈ ಬದಲಾವಣೆ ಗಮನಿಸಿ

Kumbhmela

Krishnaveni K

ಪ್ರಯಾಗ್ ರಾಜ್ , ಗುರುವಾರ, 30 ಜನವರಿ 2025 (12:52 IST)
ಪ್ರಯಾಗ್ ರಾಜ್: ಕಾಲ್ತುಳಿತದ ಬಳಿಕ ಮಹಾಕುಂಭಮೇಳದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕುಂಭಮೇಳಕ್ಕೆ ಭೇಟಿ ನೀಡುವವರು ಈ ಬದಲಾವಣೆ ಗಮನಿಸಿ.

ನಿನ್ನೆ ಮೌನಿ ಅಮವಾಸ್ಯೆ ದಿನ ಕೋಟ್ಯಾಂತರ ಮಂದಿ ಕುಂಭಮೇಳಕ್ಕೆ ಬಂದು ಪುಣ್ಯಸ್ನಾನ ಮಾಡಿದ್ದರು. ಆದರೆ ಈ ವೇಳೆ ಕಾಲ್ತುಳಿತ ಸಂಭವಿಸಿ 30 ಭಕ್ತರು ಸಾವನ್ನಪ್ಪಿದ್ದರು. ಈ ಘಟನೆ ಬಳಿಕ ಉತ್ತರ ಪ್ರದೇಶ ಸರ್ಕಾರ ಕುಂಭಮೇಳದಲ್ಲಿ ಕೆಲವೊಂದು ನಿಯಮಗಳ ಬದಲಾವಣೆ ಮಾಡಿದೆ.

ಇದುವರೆಗೆ ಕುಂಭಮೇಳದಲ್ಲಿ ವಿವಿಐಪಿ ಪಾಸ್ ಗಳನ್ನು ನೀಡಲಾಗಿತ್ತು. ನಿನ್ನೆ ಕಾಲ್ತುಳಿತದ ಘಟನೆ ಬಳಿಕ ವಿವಿಐಪಿ ಪಾಸ್ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಇಂದಿನಿಂದ ವಿವಿಐಪಿ ಪಾಸ್ ಕಿತ್ತು ಹಾಕಲಾಗಿದೆ. ಯಾವುದೇ ವಿಶೇಷ ಪಾಸ್ ಮೂಲಕ ವಾಹನಗಳ ಪ್ರವೇಶವಿರಲ್ಲ. ಈ ಮೂಲಕ ಭಕ್ತರ ಸುಗಮ ಸಂಚಾರಕ್ಕೆ ಏಕಮುಖ ರಸ್ತೆ ವ್ಯವಸ್ಥೆ ಮಾಡಲಾಗಿದೆ.

ಪ್ರಯಾಗ್ ರಾಜ್ ನ ಗಡಿ ಭಾಗಗಳಲ್ಲೇ ನಾಲ್ಕು ಚಕ್ರದ  ವಾಹನಗಳನ್ನು ತಡೆಯಲಾಗುತ್ತಿದೆ. ನಗರದಲ್ಲಿ ನಾಲ್ಕು ಚಕ್ರಗಳ ವಾಹನಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಬೀದಿ ಬದಿ ವ್ಯಾಪಾರಿಗಳನ್ನು ರಸ್ತೆ ಬದಿಯಿಂದ ಖಾಲಿ ರಸ್ತೆಗೆ ಸ್ಥಳಾಂತರಿಸಲು ಸೂಚನೆ ನೀಡಲಾಗಿದೆ. ಜನರನ್ನು ಅನಗತ್ಯವಾಗಿ ನಿಲ್ಲಿಸಬಾರದು ಎಂದು ಸೂಚನೆ ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬದುಕಿದ್ದಾಗ ನಿತ್ಯವೂ ರೊಟ್ಟಿ ನೀಡುತ್ತಿದ್ದ ಅಜ್ಜಿ ತೀರಿಕೊಂಡಾಗ ಹಸು ಮಾಡಿದ್ದೇನು ವಿಡಿಯೋ ನೋಡಿ