Daily Horoscope

Select Your Language

Notifications

webdunia
webdunia
webdunia
webdunia

Kumbhmela: ಮಹಾಕುಂಭಮೇಳದಲ್ಲಿ ನಡೆಯುವ ಅಮೃತಸ್ನಾನ ಹೇಗಿರುತ್ತದೆ, ಇಲ್ಲಿದೆ ಡೀಟೈಲ್ಸ್

Kumbhmela
ಪ್ರಯಾಗ್ ರಾಜ್: ಮಹಾಕುಂಭಮೇಳದಲ್ಲಿ ಅಮೃತಸ್ನಾನ ಹೇಗಿರುತ್ತದೆ, ಯಾವ ರೀತಿ ನಡೆಯುತ್ತದೆ, ಇದರ ವಿಶೇಷತೆ ಏನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಜನವರಿ 13 ರಂದು ಪ್ರಯಾಗ್ ರಾಜ್ ನಲ್ಲಿ ಆರಂಭವಾದ ಮಹಾಕುಂಭಮೇಳ ಫೆಬ್ರವರಿ 26 ರವರೆಗೆ ನಡೆಯಲಿದೆ. ಮಹಾಕುಂಭಮೇಳ ಕೇವಲ ಧಾರ್ಮಿಕ ಹಬ್ಬ ಮಾತ್ರವಲ್ಲ, ಇಲ್ಲಿ ಸಂಸ್ಕೃತಿಯ ಅನಾವರಣವಾಗುತ್ತದೆ. ಸಾಕಷ್ಟು ಜನ ನಿತ್ಯವೂ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.

ಮಹಾಕುಂಭಮೇಳಕ್ಕೆ ಭೇಟಿ ನೀಡಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುತ್ತಿದ್ದಾರೆ. ಕುಂಭಮೇಳದಲ್ಲಿ ಕೊನೆಯ ದಿನ ಅಮೃತಸ್ನಾನ ನಡೆಯುತ್ತದೆ. ಈ ದಿನ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವುದು ನಿಜಕ್ಕೂ ವಿಶೇಷವಾಗಿದೆ. ಕೋಟ್ಯಾಂತರ ಮಂದಿ ಈ ದಿನ ಪುಣ್ಯಸ್ನಾನ ಮಾಡಲಿದ್ದಾರೆ.

ಅಮೃತಸ್ನಾನದ ಹಿಂದಿದೆ ಹಿನ್ನಲೆ
ಅಮೃತ ಸ್ನಾನ ನಿಜಕ್ಕೂ ವಿಶೇಷವಾಗಿದೆ. ಯಾಕೆಂದರೆ ಶಿವರಾತ್ರಿ ಸಂದರ್ಭದಲ್ಲೇ ಪುಣ್ಯ ಸ್ನಾನ ಮಾಡುವುದು ಬಹಳ ವಿಶೇಷವಾಗಿದೆ. ಈ ದಿನ ಪುಣ್ಯಸ್ನಾನ ಮಾಡುವುದರಿಂದ ಮೋಕ್ಷ ಖಚಿತ ಎಂದು ಹಿಂದೂಗಳು ನಂಬುತ್ತಾರೆ. ಈ ದಿನ ಪುಣ್ಯ ಸ್ನಾನ ಮಾಡುವುದರಿಂದ ಶಿವನ ಆಶೀರ್ವಾದ, ಶಕ್ತಿ ದೊರೆಯುತ್ತದೆ. ಹೀಗಾಗಿ ಕೊನೆಯ ದಿನ ಅಮೃತಸ್ನಾನ ಮಾಡಲು ಸಾಕಷ್ಟು ಸಂಖ್ಯೆಯಲ್ಲಿ ಸಂತರು, ಭಕ್ತರು ಸೇರುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಕ್ಫ್ ಆಸ್ತಿ 20 ಸಾವಿರ ಎಕರೆ ಇದೆ ಅದನ್ನು ಕೇಳ್ತಿದ್ದೀವಷ್ಟೇ: ಜಮೀರ್ ಅಹ್ಮದ್