Select Your Language

Notifications

webdunia
webdunia
webdunia
webdunia

Kumbhmela: ಕಳ್ಳತನ ಮಾಡಿ ಕುಂಭಮೇಳಕ್ಕೆ ಹೋಗಿ ಪಾಪ ಕಳೆಯಲು ಪ್ಲ್ಯಾನ್ ಮಾಡಿದ್ದ, ಕಳ್ಳನ ಸಂಚು ಫೇಲ್ ಆಗಿದ್ದು ಹೇಗೆ

Kumbhmela

Krishnaveni K

ನವದೆಹಲಿ , ಶುಕ್ರವಾರ, 24 ಜನವರಿ 2025 (09:38 IST)
ದೆಹಲಿ: ಕುಂಭಮೇಳಕ್ಕೆ ಹೋಗಿ ಪಾಪ ಕಳೆದು ಪುಣ್ಯ ಪ್ರಾಪ್ತಿಯಾಗಬೇಕು ಎಂದು ಎಷ್ಟೋ ಜನ ಗಂಗಾ ನದಿ ಸ್ನಾನ ಮಾಡುತ್ತಾರೆ. ಆದರೆ ಇಲ್ಲೊಬ್ಬ ಕುಂಭಮೇಳಕ್ಕೆ ಹೋಗಲೆಂದೇ ಕಳ್ಳತನಕ್ಕಿಳಿದು ಪೊಲೀಸರ ಅತಿಥಿಯಾಗಿದ್ದಾನೆ.

ದೆಹಲಿಯ ಅರವಿಂದ್ ಅಲಿಯಾಸ್ ಭೋಲಾ ಎಂಬಾತನಿಗೆ ಕುಂಭಮೇಳಕ್ಕೆ ಹೋಗಬೇಕೆಂಬ ಮಹದಾಸೆಯಿತ್ತು. ಆದರೆ ಮನೆ ತುಂಬಾ ಜನ, ಬಡತನವೂ ಇದ್ದಿದ್ದರಿಂದ ಪ್ರಯಾಗ್ ರಾಜ್ ಗೆ ಹೋಗಲು ಹಣ ಹೊಂದಿಸುವ ಪರಿಸ್ಥಿತಿಯಿರಲಿಲ್ಲ.

ಹೀಗಾಗಿ ಆತ ಕಂಡುಕೊಂಡಿದ್ದು ಕಳ್ಳತನದ ದಾರಿ. ದೆಹಲಿಯಲ್ಲಿ ಮೂರು ಮನೆಗಳಿಗೆ ಕನ್ನ ಹಾಕಿ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದ ಆತ ಹಣ ಹೊಂದಿಸಲು ಪ್ರಯತ್ನಿಸಿದ್ದ. ಆದರೆ ಅಷ್ಟರಲ್ಲೇ ಆತ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಕಳ್ಳತನ ಮಾಡಿ ಕೊನೆಗೆ ಕುಂಭಮೇಳಕ್ಕೆ ಹೋಗಿ ಪುಣ್ಯಸ್ನಾನ ಮಾಡಲು ಹೊರಟವನು ಈಗ ಕಂಬಿ ಎಣಿಸುವಂತಾಗಿದೆ. ಈತನ ಮೇಲೆ ಈಗಾಗಲೇ 16 ಸಣ್ಣ ಪುಟ್ಟ ಕೇಸ್ ಗಳಿತ್ತು ಎಂದು ಪೊಲೀಸರು ಹೇಳಿದ್ದಾರೆ. ಅಲ್ಲದೆ ಮಾದಕ ವಸ್ತುಗಳ ವ್ಯಸನಿಯಾಗಿದ್ದ ಎಂದೂ ಹೇಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Bihar: ಶಿಕ್ಷಣ ಯಾಕೆ ಸುಧಾರಿಸ್ತಿಲ್ಲ ಎನ್ನುವುದಕ್ಕೆ ಇಲ್ಲಿದೆ ನೋಡಿ ಕಾರಣ