Select Your Language

Notifications

webdunia
webdunia
webdunia
webdunia

Kumbhmela: ಕುಂಭಮೇಳಕ್ಕೆ ಹೋಗಲು ಸುಲಭ ದಾರಿ ಯಾವುದು ಇಲ್ಲಿದೆ ಮಾಹಿತಿ

Kumbhmela

Krishnaveni K

ಪ್ರಯಾಗ್ ರಾಜ್ , ಮಂಗಳವಾರ, 28 ಜನವರಿ 2025 (09:16 IST)
ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪಾಲ್ಗೊಳ್ಳಲು ಬಯಸುವವರಿಗೆ ಸುಲಭ ದಾರಿ ಯಾವುದು ಇಲ್ಲಿದೆ ಮಾಹಿತಿ.

ಪ್ರಯಾಗ್ ರಾಜ್ ನ ಕುಂಭಮೇಳಕ್ಕೆ ತೆರಳಲು ಬೆಂಗಳೂರಿನಿಂದ ವಿಮಾನ ಮತ್ತು ರೈಲ್ವೇ ವ್ಯವಸ್ಥೆಯಿದೆ. ಆದರೆ ಇದೀಗ ಕುಂಭಮೇಳಕ್ಕೆ ತೆರಳುವವರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿರುವುದರಿಂದ ರೈಲುಗಳಲ್ಲಿ ಸೀಟು ಇಲ್ಲದಂತಾಗಿದೆ.

ಇನ್ನು ವಿಮಾನ ಮಾರ್ಗವಾಗಿ ಪ್ರಯಾಗ್ ರಾಜ್ ಗೆ ತೆರಳುವುದು ಅತ್ಯಂತ ದುಬಾರಿಯಾಗಿದೆ. ವಿಮಾನ ದರ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಿಂದಾಗಿ ಜನ ಸಾಮಾನ್ಯರು ವಿಮಾನ ಮಾರ್ಗವಾಗಿ ಕುಂಭಮೇಳಕ್ಕೆ ತೆರಳುವುದೇ ಕಷ್ಟವಾಗಿದೆ.

ಹೀಗಾಗಿ ಸುಲಭವಾಗಿ ಪ್ರಯಾಗ್ ರಾಜ್ ಗೆ ತಲುಪಬೇಕೆಂದರೆ ನೇರವಾಗಿ ಪ್ರಯಾಗ್ ರಾಜ್ ಗೆ ವಿಮಾನದಲ್ಲಿ ತೆರಳುವ ಬದಲು ಲಕ್ನೋ ಅಥವಾ ಆಗ್ರಾಗೆ ವಿಮಾನದಲ್ಲಿ ತೆರಳಿ ಬಳಿಕ ಅಲ್ಲಿಂದ ಲೋಕಲ್ ರೈಲುಗಳ ಮುಖಾಂತರ ಪ್ರಯಾಗ್ ರಾಜ್ ತಲುಪಬಹುದಾಗಿದೆ. ಸದ್ಯಕ್ಕೆ ಈ ಮಾರ್ಗಗಳಲ್ಲಿ ಸಂಚರಿಸಲು ಸಾಧ್ಯವಿದೆ. ಆದರೆ ಮುಂದೆ ಅಂತಿಮ ಘಟ್ಟಕ್ಕೆ ತಲುಪಿದ ಬಳಿಕ ಅದೂ ಕಷ್ಟವಾಗಬಹುದೇನೋ!

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ಹವಾಮಾನ: ಇಂದಿನಿಂದ ತಾಪಮಾನದಲ್ಲಿ ಈ ಬದಲಾವಣೆ ನಿರೀಕ್ಷಿಸಿ