Select Your Language

Notifications

webdunia
webdunia
webdunia
webdunia

ಕುಂಭಮೇಳಕ್ಕೆ ಬನ್ನಿ ಅಂತಾರೆ ಟಿಕೆಟ್ ದರ ಮಾತ್ರ ಸಾಮಾನ್ಯರಿಗೆ ಕೇಳಿದ್ರೇ ಶಾಕ್ ಆಗುವಂತಿದೆ

Air India

Krishnaveni K

ಪ್ರಯಾಗ್ ರಾಜ್ , ಸೋಮವಾರ, 27 ಜನವರಿ 2025 (15:13 IST)
ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗವಹಿಸಬೇಕು ಎಂದು ಸರ್ಕಾರವೇ ಆಹ್ವಾನ ನೀಡುತ್ತದೆ. ಆದರೆ ಅಲ್ಲಿಗೆ ಪ್ರಯಾಣ ಮಾಡಬೇಕಾದರೆ ವಿಮಾನ ಟಿಕೆಟ್ ದರ ಕೇಳಿದ್ರೇ ಜನ ಸಾಮಾನ್ಯರು ಶಾಕ್ ಆಗುವಂತಿದೆ.

ಪ್ರಯಾಗ್ ರಾಜ್ ಕುಂಭಮೇಳದಲ್ಲಿ ಭಾಗಿಯಾಗಲು ಕರ್ನಾಟಕದಿಂದಲೂ ಅನೇಕರು ಈಗಾಗಲೇ ಹೋಗಿದ್ದಾರೆ ಮತ್ತು ಇನ್ನೂ ಹೋಗುವ ಪ್ಲ್ಯಾನ್ ಮಾಡಿಟ್ಟುಕೊಂಡಿದ್ದಾರೆ. ಕುಂಭಮೇಳದಲ್ಲಿ ಸಾರ್ವಜನಿಕರಿಗೆ ಅಚ್ಚುಕಟ್ಟಾದ ವ್ಯವಸ್ಥೆಗಳನ್ನೂ ಮಾಡಲಾಗಿದೆ. ಆದರೆ ಜನ ಸಾಮಾನ್ಯರಿಗೆ ಕುಂಭಮೇಳಕ್ಕೆ ಹೋಗಲು ಎಲ್ಲವೂ ದುಬಾರಿ ಎನಿಸುತ್ತಿದೆ.

ರೈಲು ಮೂಲಕ ತೆರಳುವುದು ಜನ ಸಾಮಾನ್ಯರಿಗೆ ಸುಲಭ. ಆದರೆ ವಿಮಾನ ಟಿಕೆಟ್ ದರ ವಿಪರೀತ ಏರಿಕೆ ಮಾಡಿದ್ದರಿಂದ ಹೆಚ್ಚಿನವರು ರೈಲಿಗೇ ಹೆಚ್ಚು ಅವಲಂಬಿತರಾಗುವಂತೆ ಮಾಡಿದೆ. ಕುಂಭಮೇಳಕ್ಕೆ ತೆರಳಲು ಟಿಕೆಟ್ ದರ ಈಗ ದಾಖಲೆಯ 41 ಸಾವಿರ ರೂ.ಗೆ ಬಂದು ತಲುಪಿದೆ.

ಸಾಮಾನ್ಯವಾಗಿ ಇಲ್ಲಿಗೆ ತೆರಳಲು ವಿಮಾನ ಟಿಕೆಟ್ ದರ 6,000 ರೂ.ನಿಂದ 7000 ರೂ.ವರೆಗೆ ಇರುತ್ತದೆ. ಆದರೆ ಈಗ ಏಳು ಪಟ್ಟು ಏರಿಕೆಯಾಗಿದ್ದು ಬರೋಬ್ಬರಿ 41 ಸಾವಿರ ರೂ.ಗೆ ತಲುಪಿದೆ. ಮೂಲಗಳ ಪ್ರಕಾರ ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಮುಂದೆ ಕುಂಭಮೇಳದಲ್ಲಿ ಮೌನಿ ಅಮವಾಸ್ಯೆ, ಅಮೃತ ಸ್ನಾನ ಇರುವುದರಿಂದ ಟಿಕೆಟ್ ಗಳೂ ದುಬಾರಿಯಾಗಿದೆ ಎನ್ನಲಾಗುತ್ತಿದೆ.

ಆದರೆ ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕುಂಭಮೇಳಕ್ಕೆ ಬನ್ನಿ ಎಂದು ಆಹ್ವಾನಿಸುವ ಸರ್ಕಾರಗಳು ಟಿಕೆಟ್ ದರವನ್ನು ಸಾಮಾನ್ಯ ಜನರಿಗೆ ಸಾಧ್ಯವಾಗದಷ್ಟು ಏರಿಕೆ ಮಾಡಿರುವುದು ಯಾಕೆ? ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನು ಟಿಕೆಟ್ ದರ ದಾಖಲೆಯ ಏರಿಕೆ ಕಂಡಿರುವ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ಇಲಾಖೆ ಕಾರ್ಯದರ್ಶಿಗಳು, ಏರ್ ಲೈನ್ಸ್ ಸಂಸ್ಥೆಗಳೊಂದಿಗೆ ಸಭೆ ಕರೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಿಂಕಿ ಇಸ್ ಕಿಲ್ಲಿಂಗ್ ಮೀ, ಸೀ ವಾಂಟ್ ಮೈ ಡೆತ್: ಪತ್ನಿ ಹೆಂಡ್ತಿ ಕಿರುಕುಳಕ್ಕೆ ವ್ಯಕ್ತಿ ಆತ್ಮಹತ್ಯೆ