Select Your Language

Notifications

webdunia
webdunia
webdunia
webdunia

ಬದುಕಿದ್ದಾಗ ನಿತ್ಯವೂ ರೊಟ್ಟಿ ನೀಡುತ್ತಿದ್ದ ಅಜ್ಜಿ ತೀರಿಕೊಂಡಾಗ ಹಸು ಮಾಡಿದ್ದೇನು ವಿಡಿಯೋ ನೋಡಿ

Cow love

Krishnaveni K

ನವದೆಹಲಿ , ಗುರುವಾರ, 30 ಜನವರಿ 2025 (11:20 IST)
Photo Credit: Facebook
ನವದೆಹಲಿ: ಬದುಕಿದ್ದಾಗ ಪ್ರತಿನಿತ್ಯ ತನಗೆ ರೊಟ್ಟಿ ನೀಡಿ ಪ್ರೀತಿ ತೋರಿಸುತ್ತಿದ್ದ ಅಜ್ಜಿ ತೀರಿಕೊಂಡಾಗ ಈ ಹಸು ಮಾಡಿದ್ದೇನು ಈ ವಿಡಿಯೋ ನೋಡಿ.

ಮನುಷ್ಯರಿಗಿಂತಲೂ ಪ್ರಾಣಿಗಳಿಗೆ ಉಪಕಾರ ಸ್ಮರಣೆ ಎನ್ನುವುದು ಹೆಚ್ಚು ಎನ್ನಬಹುದು. ಅದರಲ್ಲೂ ಪಶುಗಳು, ನಾಯಿಗಳು ವಿಧೇಯತೆಗೆ ಮತ್ತೊಂದು ಹೆಸರು. ಇಲ್ಲೊಂದು ಮೂಕ ಪಶು ಅದೇ ರೀತಿ ತನಗೆ ಆಹಾರ ನೀಡುತ್ತಿದ್ದ ಅಜ್ಜಿಯ ಮೇಲೆ ಬೆಟ್ಟದಷ್ಟು ಪ್ರೀತಿ ಇಟ್ಟುಕೊಂಡಿತ್ತು.

ಪ್ರತಿನಿತ್ಯ ಮನೆಯ ಗೇಟ್ ತಾನಾಗಿಯೇ ತೆರೆದು ಬರುತ್ತಿದ್ದ ದನ ಅಜ್ಜಿ ಕೊಡುತ್ತಿದ್ದ ರೊಟ್ಟಿ ತಿಂದು ಹೋಗುತ್ತಿತ್ತು. ಒಂದು ದಿನ ಅಜ್ಜಿ ತೀರಿಕೊಂಡಿದ್ದು ಎಲ್ಲರಂತೆ ಪಶು ಕೂಡಾ ಅಂತ್ಯಸಂಸ್ಕಾರಕ್ಕೆ ಬಂದಿದೆ. ಇದನ್ನು ನೋಡಿ ಅಲ್ಲಿದ್ದವರ ಕಣ್ಣಾಲಿಗಳು ತುಂಬಿವೆ.

ಕೇವಲ ಅಂತಿಮ ದರ್ಶನ ಪಡೆದಿದ್ದು ಮಾತ್ರವಲ್ಲ, ಅಜ್ಜಿಯನ್ನು ಸ್ಮಶಾನಕ್ಕೆ ಕರೆದೊಯ್ಯುವಾಗ ಅಂತಿಮ ಯಾತ್ರೆಯಲ್ಲಿ ತಾನೂ ಪಾಲ್ಗೊಂಡಿದೆ. ಇಂತಹದ್ದೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನಿಮ್ಮ ಹೃದಯವನ್ನೂ ಕಲಕಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ನಾನು ತಪ್ಪು ಮಾಡಿಲ್ಲ, ಸಂಸದ ಡಾ ಸುಧಾಕರ್ ಆರೋಪಕ್ಕೆ ಬಿವೈ ವಿಜಯೇಂದ್ರ ಪ್ರತಿಕ್ರಿಯೆ