Select Your Language

Notifications

webdunia
webdunia
webdunia
webdunia

ಓಲಾ ಡ್ರೈವರ್ ಲೇಟ್ ಆಗಿ ಬಂದಿದ್ದಕ್ಕೆ ಬಟ್ಟೆ ಕಿತ್ತು ಹೊಡೆಯಲು ಹೋದ ಮಹಿಳೆ: ವಿಡಿಯೋ

Ola

Krishnaveni K

ಮುಂಬೈ , ಶನಿವಾರ, 25 ಜನವರಿ 2025 (14:45 IST)
ಮುಂಬೈ: ಓಲಾ ಡ್ರೈವರ್ ತಡವಾಗಿ ಪಿಕ್ ಅಪ್ ಮಾಡಲು ಬಂದಿದ್ದಕ್ಕೆ ಮಹಿಳೆಯೊಬ್ಬಳು ಡ್ರೈವರ್ ಬಟ್ಟೆ ಕಿತ್ತು ಬರುವಂತೆ ಹೊಡೆಯಲು ಹೋದ ವೈರಲ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಾಮಾನ್ಯವಾಗಿ ಓಲಾ ಡ್ರೈವರ್ ಗಳ ದುರ್ವರ್ತನೆ ಬಗ್ಗೆ ಸಾಕಷ್ಟು ಸುದ್ದಿಗಳನ್ನು ಓದಿರುತ್ತೇವೆ. ಅದರಲ್ಲೂ ಬೆಂಗಳೂರಿನಲ್ಲೇ ಓಲಾ, ಉಬರ್ ನಂತಹ ಕ್ಯಾಬ್ ಡ್ರೈವರ್ ಗಳು ಗ್ರಾಹಕರೊಂದಿಗೆ ಕೆಟ್ಟದಾಗಿ ವರ್ತನೆ ಮಾಡಿದ ಸಾಕಷ್ಟು ಉದಾಹರಣೆಗಳಿವೆ.

ಆದರೆ ಇಲ್ಲಿ ಇದು ಉಲ್ಟಾ ಆಗಿದೆ. ಮಹಿಳೆಯೊಬ್ಬರು ಮುಂಬೈ ವಿಮಾನ ನಿಲ್ದಾಣಕ್ಕೆ ತೆರಳಲು ಓಲಾ ಕ್ಯಾಬ್ ಬುಕ್ ಮಾಡಿದ್ದರು. ಆದರೆ ಡ್ರೈವರ್ ನಿಗದಿತ ಸಮಯಕ್ಕೆ ತಲುಪಿರಲಿಲ್ಲ. ಹೀಗಾಗಿ ಮಹಿಳೆ ಯದ್ವಾ ತದ್ವಾ ಸಿಟ್ಟಾಗಿದ್ದರು.

ಡ್ರೈವರ್ ತಡವಾಗಿದ್ದರಿಂದ ಮಹಿಳೆ ತೆರಳಬೇಕಾಗಿದ್ದ ವಿಮಾನ ಮಿಸ್ ಆಗಿತ್ತು. ಇದರಿಂದ ಆಕೆ ತೀರಾ ಸಿಟ್ಟಾಗಿದ್ದಳು. ವಿಮಾನ ತಪ್ಪಿ ಹೋಯಿತೆಂದು ತಿಳಿದೊಡನೆ ಡ್ರೈವರ್ ನ ಶರ್ಟ್ ಎಳೆದಾಡಿ ಕೈಗೆ ಸಿಕ್ಕ ವಸ್ತುವಿನಲ್ಲಿ ಹೊಡೆಯಲು ಮುಂದಾಗಿದ್ದಾಳೆ. ಪಕ್ಕದಲ್ಲಿದ್ದವರು ಸಮಾಧಾನಿಸಲು ಯತ್ನಿಸಿದರೂ ಆಕೆಯ ಆಕ್ರೋಶ ಕಡಿಮೆಯಾಗಲಿಲ್ಲ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

Viral Video: ವೈದ್ಯರು ನಿಜಕ್ಕೂ ದೇವರು ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ: ಮಗುವಿಗೆ ಹೇಗೆ ಜೀವ ಕೊಡಿಸುತ್ತಾರೆ ನೋಡಿ