Select Your Language

Notifications

webdunia
webdunia
webdunia
webdunia

ಬೀದಿ ನಾಯಿಯನ್ನು ಜೀವಂತ ತಿಂದು ಹಾಕಿದ ಪಿಟ್ ಬುಲ್ ತಳಿ ನಾಯಿ: ವಿಡಿಯೋ

Dog

Krishnaveni K

ಬೆಂಗಳೂರು , ಶುಕ್ರವಾರ, 24 ಜನವರಿ 2025 (12:47 IST)
ಬೆಂಗಳೂರು: ಪಿಟ್ ಬುಲ್ ನಾಯಿ ಎಷ್ಟು ಅಪಾಯಕಾರಿ ಎಂಬುದು ಈಗಾಗಲೇ ಹಲವು ಘಟನೆಗಳಿಂದ ತಿಳಿದುಬಂದಿದೆ. ಇದೀಗ ಪಿಟ್  ಬುಲ್ ಜಾತಿಯ ನಾಯಿಯೊಂದು ಬೀದಿ ನಾಯಿಯನ್ನು ಜೀವಂತವಾಗಿ ತಿಂದು ಹಾಕುತ್ತಿರುವ ವಿಡಿಯೋವೊಂದು  ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪಿಟ್ ಬುಲ್ ನಾಯಿಯನ್ನು ಅದರ ಒಡತಿ ಹೊರಗೆ ವಾಕಿಂಗ್ ಕರೆದುಕೊಂಡು ಬಂದಿದ್ದರು. ಈ ವೇಳೆ ಬೀದಿನಾಯಿಯೊಂದನ್ನು ನೋಡಿ ಪಿಟ್ ಬುಲ್ ನಾಯಿ ಕೆರಳಿದೆ. ನೇರವಾಗಿ ಹೋಗಿ ಬೀದಿ ನಾಯಿಯ ಕುತ್ತಿಗೆಗೇ ಬಾಯಿ ಹಾಕಿದೆ.

ಬೀದಿ ನಾಯಿ ತನ್ನ ರಕ್ಷಣೆಗಾಗಿ ಎಷ್ಟೇ ಹೊರಳಾಡಿದರೂ ಅದಕ್ಕೆ ಪಿಟ್ ಬುಲ್ ನಾಯಿಯಯ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಎಲ್ಲಕ್ಕಿಂತ ಹೆಚ್ಚು ಶಾಕಿಂಗ್ ಎಂದರೆ ಅದರ ಒಡತಿ ಈ ಸನ್ನಿವೇಶವನ್ನು ನೋಡುತ್ತಾ ನಿಂತಿದ್ದಾಳೆ ಹೊರತು ತಡೆಯುವ ಯತ್ನ ಮಾಡಿಲ್ಲ.

ಬದಲಾಗಿ ಅಕ್ಕ ಪಕ್ಕದಲ್ಲಿರುವವರ ನೆರವು ಕೇಳುತ್ತಿದ್ದಾಳೆ. ಯಾರೋ ಬಂದು ಕಲ್ಲು ಬಿಸಾಕಿ ಬೀದಿ ನಾಯಿಯನ್ನು ರಕ್ಷಣೆ ಮಾಡಲು ಹೋದಾಗ ಮಹಿಳೆ ಅವರತ್ತಲೇ ನನ್ನ ನಾಯಿಗೆ ಏನೂ ಮಾಡಬೇಡಿ ಎನ್ನುತ್ತಾಳೆ. ಈ ವಿಡಿಯೋ ನಿಜಕ್ಕೂ ಶಾಕಿಂಗ್ ಆಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳೂರು ಬ್ಯಾಂಕ್ ದರೋಡೆಕೋರರನ್ನು ಹಿಡಿಯುವುದು ಒಂದೇ ದಿನ ತಡವಾಗಿದ್ದರೂ ಈ ಅನಾಹುತವಾಗ್ತಿತ್ತು