Select Your Language

Notifications

webdunia
webdunia
webdunia
webdunia

ಕುಂಭಮೇಳದಲ್ಲಿ ಭಾಗಿಯಾದ ಸ್ಯಾಂಡಲ್ ವುಡ್ ತಾರೆಯರು ಇವರೇ ನೋಡಿ

Anchor Anushree

Krishnaveni K

ಬೆಂಗಳೂರು , ಮಂಗಳವಾರ, 4 ಫೆಬ್ರವರಿ 2025 (11:45 IST)
ಬೆಂಗಳೂರು: ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಸ್ಯಾಂಡಲ್ ವುಡ್ ನ ಕೆಲವು ತಾರೆಯರೂ ಭಾಗಿಯಾಗಿದ್ದಾರೆ. ಕುಂಭಮೇಳದಲ್ಲಿ ಭಾಗಿಯಾಗಿರುವ ಸ್ಯಾಂಡಲ್ ವುಡ್ ತಾರೆಯರು ಯಾರು ನೋಡಿ.

ನಿರ್ಮಾಪಕ ಆರ್ ಚಂದ್ರು
ಕಬ್ಜದಂತಹ ಬಿಗ್ ಬಜೆಟ್ ಸಿನಿಮಾಗಳ ನಿರ್ಮಾಪಕ ಆರ್ ಚಂದ್ರು ಕುಂಭಮೇಳಕ್ಕೆ ತಮ್ಮ ಸ್ನೇಹಿತರೊಂದಿಗೆ ಭೇಟಿ ನೀಡಿ ಪುಣ್ಯ ಸ್ನಾನ ಮಾಡಿ ಬಂದಿದ್ದಾರೆ. ಈ ಕ್ಷಣ ಅಮೋಘವಾಗಿತ್ತು ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಶೈನ್ ಶೆಟ್ಟಿ
ಅಪಾರ ದೈವ ಭಕ್ತಿಯಿರುವ ಶೈನ್ ಶೆಟ್ಟಿ ಎರಡು ವಾರದ ಮೊದಲೇ ಕುಂಭಮೇಳಕ್ಕೆ ಭೇಟಿ ನೀಡಿ ಬಂದಿದ್ದಾರೆ. ಅವರಿಗೆ ಸ್ನೇಹಿತರೂ ಸಾಥ್ ನೀಡಿದ್ದಾರೆ. ಗಂಗಾನದಿ ಸ್ನಾನ ಮಾಡಿ ಪಕ್ಕಾ ಸಾಂಪ್ರದಾಯಿಕ ಶೈಲಿಯ ಉಡುಗೆ ತೊಟ್ಟು ಪ್ರಯಾಗ್ ರಾಜ್ ಸುತ್ತು ಹೊಡೆದಿದ್ದಾರೆ.

ಆಂಕರ್ ಅನುಶ್ರೀ, ರಾಜ್ ಬಿ ಶೆಟ್ಟಿ
ರಾಜ್ ಬಿ ಶೆಟ್ಟಿ ಆಧ್ಯಾತ್ಮದ ಬಗ್ಗೆ ಅಪಾರ ಒಲವು ಹೊಂದಿದ್ದಾರೆ. ಆಂಕರ್ ಅನುಶ್ರೀ, ರಾಜ್ ಬಿ ಶೆಟ್ಟಿ ಮತ್ತು ಚಾರ್ಲಿ ನಿರ್ದೇಶಕ ಕಿರಣ್ ರಾಜ್ ಸೇರಿದಂತೆ ಮಂಗಳೂರು ಮೂಲದ ಕಲಾವಿದರ ದಂಡು ಕುಂಭಮೇಳಕ್ಕೆ ಭೇಟಿ ನೀಡಿ ಬಂದಿದ್ದಾರೆ.

ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ
ಕೆಜಿಎಫ್ ಸಿನಿಮಾ ಮೂಲಕ ಮನೆ ಮಾತಾಗಿದ್ದ ನಟಿ ಶ್ರೀನಿಧಿ ಶೆಟ್ಟಿ ಮಾಸ್ಕ್ ಹಾಕಿಕೊಂಡು ಯಾರೂ ತಮ್ಮನ್ನು ಗುರುತು ಹಿಡಿಯದಂತೆ ಮಾಸ್ಕ್ ಹಾಕಿಕೊಂಡು ಪ್ರಯಾಗ್ ರಾಜ್ ನಲ್ಲಿ ಸುತ್ತಾಡಿದ್ದಲ್ಲದೆ ಗಂಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ.

ಸಾನ್ಯ ಅಯ್ಯರ್
ಬಿಗ್ ಬಾಸ್ ಖ್ಯಾತಿಯ ಕಿರುತೆರೆ, ಸ್ಯಾಂಡಲ್ ವುಡ್ ನಟಿ ಸಾನ್ಯ ಅಯ್ಯರ್ ಕುಂಭಮೇಳಕ್ಕೆ ಭೇಟಿ ನೀಡಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಾಯಕ ಸಂಜಿತ್ ಹೆಗ್ಡೆ ವಿರುದ್ಧ ಮತ್ತೆ ಕೆಂಡಕಾರಿದ ಕೆ ಮಂಜು: ಗೆಲ್ಲಿಸಿದವರನ್ನೇ ಮರೆತ ಆರೋಪ