ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ತೆರಳುವ ಯಾತ್ರಿಕರಿಗೆ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ. ಬರೋಬ್ಬರಿ 300 ಕಿ.ಮೀ. ಟ್ರಾಫಿಕ್ ಜಾಮ್ ಆಗಿದ್ದು 48 ಗಂಟೆ ಕಾಲ ಯಾತ್ರಿಕರು ರಸ್ತೆಯಲ್ಲೇ ಕಳೆಯುವಂತಾಗಿದೆ.
ಮಹಾ ಕುಂಭಮೇಳ ಇನ್ನು ಕೆಲವೇ ದಿನಗಳು ಬಾಕಿಯಿದ್ದು ಯಾತ್ರಿಕರು ಈಗ ಸಾಕಷ್ಟು ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ನಿನ್ನೆಯಂತೂ ದಾಖಲೆಯ ಪ್ರಮಾಣದಲ್ಲಿ ಜನ ಬಂದು ಪುಣ್ಯಸ್ನಾನ ಮಾಡಿಕೊಂಡು ಹೋಗಿದ್ದರು.
ಇದರ ಬೆನ್ನಲ್ಲೇ ಈಗ ಟ್ರಾಫಿಕ್ ಜಾಮ್ ನ ಸುದ್ದಿ ಬಂದಿದೆ. ವೀಕೆಂಡ್ ನಲ್ಲಿ ದಾಖಲೆಯ ಸಂಖ್ಯೆಯಲ್ಲಿ ಕುಂಭಮೇಳಕ್ಕೆ ಜನ ಬಂದಿದ್ದರಿಂದ ಸುಮಾರು 300 ಕಿ.ಮೀ.ಗಳಷ್ಟು ಟ್ರಾಫಿಕ್ ಜಾಮ್ ಆಗಿದೆ. ಇದರಿಂದಾಗಿ ಯಾತ್ರಿಕರು ಸುಮಾರು 48 ಗಂಟೆ ಕಾಲ ರಸ್ತೆಯಲ್ಲೇ ಕಾಲ ಕಳೆಯುವಂತಾಗಿದೆ.
ಪೊಲೀಸರಿಗೆ ಈಗ ಸಂಚಾರ ವ್ಯವಸ್ಥೆಯನ್ನು ನಿಯಂತ್ರಿಸುವುದೇ ತಲೆನೋವಾಗಿದೆ. ಪ್ರಯಾಗ್ ರಾಜ್ ಗೆ ಬಂದು ಸೇರುವ ಹೆಚ್ಚಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಇದರಿಂದಾಗಿ ಅಲ್ಲಿಂದ ಹೊರ ಹೋಗಲು ಅಥವಾ ಬರಲು ಸಾಧ್ಯವಾಗದ ಪರಿಸ್ಥಿತಿಯಾಗಿದೆ. ಟ್ರಾಫಿಕ್ ಜಾಮ್ ಬಗ್ಗೆ ಎಸ್ ಪಿ ನಾಯಕ ಅಖಿಲೇಶ್ ಯಾದವ್ ಟ್ವೀಟ್ ಮಾಡಿ ಟೀಕೆ ಮಾಡಿದ್ದಾರೆ.