ವಿಜಯನಗರ: ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರನ್ನು ವಿಮಾನದಲ್ಲಿ ಟೂರ್ ಮಾಡಿಸಿ ವಿಜಯನಗರದ ಹರಪನಹಳ್ಳಿಯ ವ್ಯಕ್ತಿ ಹೃದಯವಂತಿಕೆ ಮೆರೆದಿದ್ದಾನೆ.
ಜಮೀನ್ದಾರನಾಗಿರುವ ವಿಶ್ವನಾಥ್ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಬಡ ಮಹಿಳೆಯರಿಗೆ ಏನಾದರೂ ಗಿಫ್ಟ್ ಕೊಡಬೇಕು ಎಂದುಕೊಂಡಿದ್ದ. ಅದಕ್ಕಾಗಿ ಅವರು ಜೀವನಪರ್ಯಂತ ನೆನಪಿನಲ್ಲಿಟ್ಟುಕೊಳ್ಳುವಂತಹ ಉಡುಗೊರೆಯನ್ನೇ ನೀಡಿದ್ದಾನೆ.
ಒಟ್ಟು 10 ಮಂದಿ ಮಹಿಳಾ ಕೂಲಿ ಕಾರ್ಮಿಕರಿಗೆ ಗೋವಾಗೆ ವಿಮಾನದಲ್ಲಿ ಟೂರ್ ಮಾಡಿಸಿದ್ದಾರೆ. ಶಿವಮೊಗ್ಗ ವಿಮಾನನಿಲ್ದಾಣದಿಂದ ಗೋವಾಗೆ ವಿಮಾನ ಪ್ರಯಾಣ ಮಾಡಿಸಿ ಬಡ ಮಹಿಳೆಯರ ಮುಖದಲ್ಲಿ ಸಂತಸ ಮೂಡಿಸಿದ್ದಾರೆ.
ವಿಮಾನದಲ್ಲಿ ಪ್ರಯಾಣ ಮಾಡುವುದು ಈ ಮಹಿಳೆಯರ ಪಾಲಿಗೆ ಕನಸಾಗಿತ್ತು. ಆದರೆ ತೋಟದಲ್ಲಿ ಕೆಲಸ ಮಾಡುವಾಗ ವಿಮಾನ ಕಂಡರೆ ನಿಂತು ಕುತೂಹಲದಿಂದ ನೋಡುತ್ತಿದ್ದರಂತೆ. ಹೀಗಾಗಿ ಈಗ ಆ ಮಹಿಳೆಯರಿಗೆ ವಿಮಾನ ಪ್ರಯಾಣ ಮಾಡಿಸಿ ಕನಸು ನನಸಾಗಿಸಿದ್ದಾರೆ.