Select Your Language

Notifications

webdunia
webdunia
webdunia
webdunia

ಟೂರ್ ಹೋಗುವಾಗ ಯಶ್ ಬಿಟ್ಟು ಹೋದ ರಾಧಿಕಾ ಪಂಡಿತ್: ಫ್ಯಾನ್ಸ್ ಪ್ರಶ್ನೆ ಮೇಲೆ ಪ್ರಶ್ನೆ

Radhika Pandit

Krishnaveni K

ಬೆಂಗಳೂರು , ಗುರುವಾರ, 1 ಆಗಸ್ಟ್ 2024 (09:04 IST)
Photo Credit: Instagram
ಬೆಂಗಳೂರು: ನಟಿ ರಾಧಿಕಾ ಪಂಡಿತ್ ತಮ್ಮ ಮಕ್ಕಳೊಂದಿಗೆ ಗೋವಾ ಪ್ರವಾಸದಲ್ಲಿದ್ದಾರೆ. ಆದರೆ ಈ ವೇಳೆ ಅವರ ಜೊತೆಗೆ ಪತಿ ರಾಕಿಂಗ್ ಸ್ಟಾರ್ ಯಶ್ ಇಲ್ಲ. ಇದರಿಂದಾಗಿ ಅಭಿಮಾನಿಗಳು ಅವರನ್ನು ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದ್ದಾರೆ.

ರಾಧಿಕಾ ಪಂಡಿತ್ ತಮ್ಮ ತಂದೆ-ತಾಯಿ ಹಾಗೂ ಇಬ್ಬರು ಮಕ್ಕಳೊಂದಿಗೆ ಹೊನ್ನಾವರ, ಗೋವಾ ಪ್ರವಾಸದಲ್ಲಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ದೋಣಿ ವಿಹಾರ ನಡೆಸುತ್ತಿರುವ, ಮಸ್ತ್ ಮಜಾ ಮಾಡುತ್ತಿರುವ ಸುಂದರ ಫೋಟೋಗಳನ್ನು ಪ್ರಕಟಿಸಿದ್ದಾರೆ.

ಆದರೆ ಈ ಫೋಟೋದಲ್ಲೆಲ್ಲೂ ಯಶ್ ಇಲ್ಲ. ಸಾಮಾನ್ಯವಾಗಿ ರಾಧಿಕಾ ಎಲ್ಲೇ ಹೋದರೂ ಯಶ್ ಕೂಡಾ ಇದ್ದೇ ಇರುತ್ತಾರೆ. ಪ್ರವಾಸದ ವೇಳೆ ರಾಧಿಕಾ ಒಂಟಿಯಾಗಿರುವುದು ಅಪರೂಪ. ಆದರೆ ಸದ್ಯಕ್ಕೆ ಯಶ್ ಟಾಕ್ಸಿಕ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದು ರಾಧಿಕಾ ಮತ್ತು ಮಕ್ಕಳ ಜೊತೆ ಪ್ರವಾಸದಲ್ಲಿಲ್ಲ.

ಆದರೆ ರಾಕಿ ಭಾಯಿ ಕಾಣಿಸಿದ ಕಾರಣಕ್ಕೆ ಅಭಿಮಾನಿಗಳು ನಮ್ಮ ಬಾಸ್ ಎಲ್ಲಿ? ಬಾಸ್ ನ ಬಿಟ್ಟು ಯಾಕೆ ಹೋದ್ರಿ ಅತ್ತಿಗೆ ಅಂತ ರಾಧಿಕಾರನ್ನು ಪ್ರಶ್ನೆ ಮೇಲೆ ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ಯಶ್ ಟಾಕ್ಸಿಕ್ ಸಿನಿಮಾದಲ್ಲಿ ಬ್ಯುಸಿಯಾಗಿರಬಹುದು ಎಂದು ತಮ್ಮಷ್ಟಕ್ಕೆ ತಾವೇ ಉತ್ತರಕಂಡುಕೊಂಡಿದ್ದಾರೆ. ಇನ್ನು ಕೆಲವರು ನಿಮಗೆ ವಯಸ್ಸೇ ಆಗಲ್ವಾ? ನೀವೊಂಥರಾ ಸಂತೂರ್ ಮಮ್ಮಿ ಎಂದು ರಾಧಿಕಾರನ್ನು ಹೊಗಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಟಾರ್ ಕಲ್ಚರ್‌ನಿಂದ ಇಂತವರಿಗೆ ವಾಲ್ಯೂ ಕೊಡ್ತೇವೆ: ಚೇತನ್ ಅಹಿಂಸಾ