Select Your Language

Notifications

webdunia
webdunia
webdunia
webdunia

ರಾಕಿಂಗ್ ಸ್ಟಾರ್ ಯಶ್ ಮಕ್ಕಳಿಗೆ ಪ್ರಭಾಸ್ ಕಲ್ಕಿ ತಂಡದಿಂದ ಬಂತು ವಿಶೇಷ ಉಡುಗೊರೆ

Yash

Krishnaveni K

ಬೆಂಗಳೂರು , ಗುರುವಾರ, 6 ಜೂನ್ 2024 (12:05 IST)
ಬೆಂಗಳೂರು: ಪ್ರಭಾಸ್ ನಾಯಕರಾಗಿರುವ ಕಲ್ಕಿ 2898 ಸಿನಿಮಾ ತಂಡ ರಾಕಿಂಗ್ ಸ್ಟಾರ್ ಯಶ್ ಮಕ್ಕಳಿಗೆ ವಿಶೇಷ ಟಾಯ್ ಉಡುಗೊರೆ ಕಳುಹಿಸಿಕೊಟ್ಟಿದೆ.
 
ಕೆಲವು ದಿನಗಳ ಹಿಂದೆ ಟಾಲಿವುಡ್ ನಟ ರಾಮ್ ಚರಣ್ ಪುತ್ರಿಗೂ ಕಲ್ಕಿ ಟೀಂ ಇಂತಹದ್ದೇ ಆಟಿಕೆಗಳ ಉಡುಗೊರೆ ಕಳುಹಿಸಿತ್ತು. ಇದೀಗ ಯಶ್ ಮಕ್ಕಳಾದ ಐರಾ ಮತ್ತು ಯಥರ್ವ್ ಗೂ ಕಲ್ಕಿ ಟೀಂ ಉಡುಗೊರೆ ಕಳುಹಿಸಿಕೊಟ್ಟಿದೆ.
 
ಕಲ್ಕಿ ಸಿನಿಮಾದಲ್ಲಿ ಬಳಸಲಾಗುವ ವಿಶೇಷ ವಿನ್ಯಾಸದ ಕಾರ್ ಹೋಲುವ ಆಟಿಕೆಯನ್ನು ಕಳುಹಿಸಿಕೊಡಲಾಗಿದೆ. ಇದನ್ನು ರಾಧಿಕಾ ಪಂಡಿತ್ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಹಂಚಿಕೊಂಡಿದ್ದು ಕಲ್ಕಿ ಟೀಂಗೆ ಶುಭ ಕೋರಿದ್ದಾರೆ.
 
ಉಡುಗೊರೆ ಕಳುಹಿಸಿದ ಕಲ್ಕಿ ಟೀಂಗೆ ಯಶ್ ಮಕ್ಕಳೂ ತಮ್ಮದೇ ರೀತಿಯಲ್ಲಿ ಕ್ಯೂಟ್ ಆಗಿ ಧನ್ಯವಾದದ ಸಲ್ಲಿಸಿದ್ದಾರೆ. ಕಲ್ಕಿ ಟೀಂಗೆ ಥ್ಯಾಂಕ್ಯೂ ಬುಜ್ಜಿ ಎಂದು ಬರೆದು ವಿಶ್ ಮಾಡಿದ್ದಾರೆ.  ಕಲ್ಕಿ ಟೀಂ ತಮ್ಮ ಚಿತ್ರದ ಪ್ರಮೋಷನ್ ಗಾಗಿ ಈ ರೀತಿ ವಿನೂತನವಾಗಿ ಕಲ್ಕಿ ಬುಜ್ಜಿ ಟಾಯ್ಸ್ ಕಳುಹಿಸಿಕೊಡುತ್ತಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ಕುಟುಂಬಕ್ಕೆ ಹೆಮ್ಮೆಯ ದಿನ: ಚಿಕ್ಕಪ್ಪನ ಗೆಲುವು ಸಂಭ್ರಮಿಸಿದ ರಾಮ್‌ಚರಣ್