Select Your Language

Notifications

webdunia
webdunia
webdunia
webdunia

ಸಿನಿಮಾಗೆ ಕಮ್ ಬ್ಯಾಕ್ ಯಾವಾಗ ಮೇಡಂ ಎಂದಿದ್ದಕ್ಕೆ ರಾಧಿಕಾ ಪಂಡಿತ್ ಪ್ರತಿಕ್ರಿಯೆ ಹೀಗಿತ್ತು

Radhika Pandit

Krishnaveni K

ಬೆಂಗಳೂರು , ಬುಧವಾರ, 29 ಮೇ 2024 (11:17 IST)
ಬೆಂಗಳೂರು: ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅಪರೂಪಕ್ಕೆ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರಾವಳಿ ನಡೆಸಿದ್ದಾರೆ. ಈ ವೇಳೆ ಅವರು ಅಭಿಮಾನಿಗಳ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

ಬಹಳ ದಿನಗಳಾಯ್ತು, ನಿಮ್ಮೊಂದಿಗೆ ಮಾತನಾಡಬೇಕೆನಿಸುತ್ತಿದೆ. ಏನು ಪ್ರಶ್ನೆ ಬೇಕಾದರೂ ಕೇಳಿ ಎಂದು ಪೋಸ್ಟ್ ಮಾಡಿದ್ದರು. ಜೊತೆಗೆ ಅಭಿಮಾನಿಗಳೊಂದಿಗೆ ಪ್ರಶ್ನೋತ್ತರಾವಳಿ ನಡೆಸಿದ್ದರು.

ಈ ವೇಳೆ ಅಭಿಮಾನಿಯೊಬ್ಬರು ಸಿನಿಮಾಗೆ ಯಾವಾಗ ಕಮ್ ಬ್ಯಾಕ್ ಮಾಡ್ತೀರಿ ಮೇಡಂ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ರಾಧಿಕಾ ‘ಸಮಯ ಕೂಡಿ ಬಂದಾಗ ಬಂದೇ ಬರುತ್ತೇನೆ’ ಎಂದಿದ್ದಾರೆ. ಆ ಮೂಲಕ ಸಿನಿಮಾಗೆ ಮುಂದೊಂದು ದಿನ ಕಮ್ ಬ್ಯಾಕ್ ಮಾಡುವುದಾಗಿ ಹೇಳಿದ್ದಾರೆ.

ಅಷ್ಟೇ ಅಲ್ಲ, ಹಲವರು ನಿಮ್ಮ ಮತ್ತು ಯಶ್ ನಡುವೆ ಇಷ್ಟೊಂದು ಉತ್ತಮ ಬಾಂಧವ್ಯವಿರಲು ಹೇಗೆ ಸಾಧ್ಯ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ರಾಧಿಕಾ ಯಾವುದೇ ಸಂಬಂಧದಲ್ಲೂ ಮೊದಲು ಫ್ರೆಂಡ್ ಶಿಪ್ ಇರಬೇಕು ಎಂದಿದ್ದಾರೆ. ಕಿತ್ತಾಟಗಳು ಎಲ್ಲಾ ಸಂಬಂಧದಲ್ಲೂ ಇರಬೇಕು. ಆದರೆ ಅದು ಅತಿರೇಕಕ್ಕೆ ಹೋಗಬಾರದು. ಒಬ್ಬರ ದೌರ್ಬಲ್ಯವನ್ನು ಅರ್ಥಮಾಡಿಕೊಂಡು ಹೊಂದಿಕೊಂಡು ಬಾಳಬೇಕು ಎಂದು ಕಿವಿ ಮಾತು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆನ್ ಲೈನ್ ಲೀಕ್ ಭಯಕ್ಕೆ ಪುಷ್ಪ 2 ಚಿತ್ರತಂಡ ಮಾಡಿರುವ ಉಪಾಯಗಳಿವು