Select Your Language

Notifications

webdunia
webdunia
webdunia
Sunday, 13 April 2025
webdunia

ವೆಸ್ಟ್‌ಇಂಡೀಸ್‌ ಕ್ರಿಕೆಟಿಗ ರಸೆಲ್ ಜತೆ ಡಾನ್ಸ್‌ ಮಾಡಿದ ಅನನ್ಯಾ ಪಾಂಡೆ

Ananya Paandey

sampriya

ಚೆನ್ನೈ , ಮಂಗಳವಾರ, 28 ಮೇ 2024 (16:00 IST)
Photo By Instagram
ಚೆನ್ನೈ: ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡ ಚಾಂಪಿಯನ್​ ಪಟ್ಟ ಅಲಂಕರಿಸಿತು. ಈ ಗೆಲುವಿನ ಬಳಿಕ ಕೋಲ್ಕತ್ತ​ ತಂಡ ಪಬ್​ನಲ್ಲಿ ಪಾರ್ಟಿ ಮಾಡಿತ್ತು. ಇದೇ ವೇಳೆ ವೆಸ್ಟ್‌ಇಂಡೀಸ್‌ ಕ್ರಿಕೆಟಿಗ ಆ್ಯಂಡ್ರೆ ರಸೆಲ್ ಅವರು ಬಾಲಿವುಡ್ ನಟಿ ಅನನ್ಯಾ ಪಾಂಡೆ ಜತೆ ಡಾನ್ಸ್‌ ಮಾಡಿದ್ದು, ಆ ವಿಡಿಯೊ ವೈರಲ್ ಆಗಿದೆ.

ಫೈನಲ್‌ ಪಂದ್ಯದ ಬಳಿಕ ಕೆಕೆಆರ್‌ ತಂಡದ ಸಹ ಮಾಲೀಕನೂ ಆಗಿರುವ ಶಾರೂಖ್ ಖಾನ್ ಅಭಿನಯದ ಡಂಕಿ ಚಿತ್ರದ​ ಲುಟ್ ಪಟ್ ಗಯಾ ಹಾಡಿಗೆ ಆ್ಯಂಡ್ರೆ ರಸೆಲ್ ಹೆಜ್ಜೆ ಹಾಕಿದ್ದಾರೆ.  ಅವರಿಗೆ ಅನನ್ಯಾ ಪಾಂಡೆ ಸಾಥ್‌ ನೀಡಿದ್ದಾರೆ.

ಅಲ್ಲದೆ, ಈಚೆಗೆ ರಸೆಲ್ ತನ್ನ ಕಾರಿನಲ್ಲಿ ಪ್ರಯಾಣಿಸುವಾಗ ಮತ್ತು ವಿಮಾನ ಪ್ರಯಾಣದ ಸಮಯದಲ್ಲಿ ಡಂಕಿ ಚಿತ್ರದ ಲುಟ್ ಪುಟ್ ಗಯಾ ಹಾಡನ್ನು ಅವರು ಗುನುಗಿದ್ದರು. ಈ ವೇಳೆ ರಿಂಕು ಸಿಂಗ್​ ಕೂಡ ರಸೆಲ್​ಗೆ ಸಾಥ್​ ನೀಡಿದ್ದರು. ಈ ವಿಡಿಯೊ ಕೂಡ ವೈರಲ್​ ಆಗಿತ್ತು.

ರಸೆಲ್ ಬಾಲಿವುಡ್​ ನಟಿ ಅವಿಕಾ ಗೋರ್ ಜತೆ ಲುಂಗಿಯಲ್ಲಿ ಮಸ್ತ್​ ಸ್ಟೆಪ್ಸ್ ಹಾಕಿದ ವಿಡಿಯೊ ಕೂಡ ಕೆಲವು ದಿನಗಳ ಹಿಂದೆ ವೈರಲ್​ ಆಗಿತ್ತು. ​ಲಡ್ಕಿ ತು ಕಮಲ್ ಕಿ ಎನ್ನುವ ಹಾಡಿಗೆ ರೆಸೆಲ್ ಅವಿಕಾ ಸೇರಿ ಹೆಜ್ಜೆ ಹಾಕಿರುವ ಈ ಹಾಡು ಯೂಟ್ಯೂಬ್​ನಲ್ಲಿ ಮೇ 9 ರಂದು ಬಿಡುಗಡೆಯಾಗಿತ್ತು.

ಚೆನ್ನೈಯ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿದ್ದ ಅತ್ಯಂತ ನೀರಸ ಫೈನಲ್​ ಪಂದ್ಯದಲ್ಲಿ ಕೋಲ್ಕತ್ತ ತಂಡವು ಹೈದರಾಬಾದ್‌ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿ ಮೂರನೇ ಬಾರಿ ಪ್ರಶಸ್ತಿ ಗೆದ್ದಿಕೊಂಡಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಅಲ್ಲು- ರಶ್ಮಿಕಾ ಕಾಂಬಿನೇಷನ್‌ನ ಪುಷ್ಪಾ 2 ಸಿನಿಮಾ ಎರಡನೇ ಹಾಡು ನಾಳೆ ರಿಲೀಸ್‌