Select Your Language

Notifications

webdunia
webdunia
webdunia
webdunia

ಸಿನಿಮಾ ಬಿಡುಗಡೆಗೂ ಮುನ್ನಾ ಶ್ರೀದೇವಿಯ ನೆಚ್ಚಿನ ದೇವಸ್ಥಾನಕ್ಕೆ ಭೇಟಿ ಕೊಟ್ಟ ಮಗಳು ಜಾನ್ವಿ ಕಪೂರ್

Janhvi Kapoor

sampriya

ಮುಂಬೈ , ಮಂಗಳವಾರ, 28 ಮೇ 2024 (14:37 IST)
Photo By Instagram
ಮುಂಬೈ: ನಟಿ ಜಾನ್ವಿ ಕಪೂರ್ ತನ್ನ ತಾಯಿ,ಬಾಲಿವುಡ್‌ನ ಖ್ಯಾತ ನಟಿ ಶ್ರೀದೇವಿಯ ಬಗ್ಗೆ ಪ್ರೀತಿ ಮತ್ತು ಕೃತಜ್ಞತೆ ಆಗಾಗ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಮಾಧ್ಯಮದ ಮುಂದೆ ಮಾತನಾಡುವಾಗಲು ತಮ್ಮ ತಾಯಿಯನ್ನು ಗುಣಗಾನ ಮಾಡುತ್ತಲೇ ಇರುತ್ತಾರೆ. ಇದೀಗ ತಮ್ಮ ತಾಯಿಯ ನೆಚ್ಚಿನ ಸ್ಥಳಗಳಲ್ಲಿ ಒಂದಾಗಿರುವ ಚೆನ್ನೈನಲ್ಲಿರುವ ಶ್ರೀದೇವಿಯ ಮುಪ್ಪತಮ್ಮನ್ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಭೇಟಿಯ ಫೋಟೋಗಳನ್ನು ಜಾನ್ವಿ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ.


"ಮೊದಲ ಬಾರಿಗೆ ಮುಪ್ಪತ್ತನಂ ದೇವಸ್ಥಾನಕ್ಕೆ ಭೇಟಿ ನೀಡಿದ್ದೇನೆ... ಚೆನ್ನೈನಲ್ಲಿ ಮುಮ್ಮಾಗಳು ಭೇಟಿ ನೀಡಲು ಅತ್ಯಂತ ನೆಚ್ಚಿನ ಸ್ಥಳ" ಎಂದು ಅವರು ಪೋಸ್ಟ್ ಮಾಡಿದ್ದಾರೆ.


ನಟಿ ಶ್ರೀದೇವಿ ಅವರು ಫೆಬ್ರವರಿ 24, 2018 ರಂದು ನಿಧನರಾದರು. ಜಾನ್ವಿ ಪ್ರಸ್ತುತ ತಮ್ಮ ಮುಂಬರುವ ಚಿತ್ರ 'ಮಿಸ್ಟರ್ ಅಂಡ್ ಮಿಸಸ್ ಮಹಿ' ಪ್ರಚಾರದಲ್ಲಿ ನಿರತರಾಗಿದ್ದಾರೆ, ರಾಜ್‌ಕುಮಾರ್ ರಾವ್ ಸಹ ನಟಿಸಿದ್ದಾರೆ.

‘ಧಡಕ್’, ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್’, ‘ಮಿಲಿ’ ಚಿತ್ರಗಳ ಮೂಲಕ ಗುರುತಿಸಿಕೊಂಡಿರುವ ಜಾಹ್ನವಿ ಚಿತ್ರದಲ್ಲಿ ಮುಗ್ಧ ಹುಡುಗಿ ಮಹಿಮಾ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಸಹಯೋಗವನ್ನು ಗುರುತಿಸುತ್ತದೆ. ಇದು ಜಾನ್ವಿ ಮತ್ತು ರಾಜ್‌ಕುಮಾರ್ ನಡುವಿನ ಎರಡನೇ ಸಹಯೋಗವನ್ನು ಸೂಚಿಸುತ್ತದೆ. ಈ ಹಿಂದೆ 'ರೂಹಿ' ಚಿತ್ರದಲ್ಲಿ ಇವರಿಬ್ಬರು ಕಾಣಿಸಿಕೊಂಡಿದ್ದರು. ಈ ಚಿತ್ರಕ್ಕೆ ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಬೆಂಬಲ ನೀಡಿದೆ. ಇದು ಮೇ 31 ರಂದು ಚಿತ್ರಮಂದಿರಗಳಿಗೆ ಬರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗನಿಗಾಗಿ ವಿಚ್ಛೇದಿತ ಪತ್ನಿ ಜತೆ ಕಾಣಿಸಿಕೊಂಡ ನಟ ಹೃತಿಕ್‌ ರೋಷನ್