ಬೆಂಗಳೂರು: ಇಂದು ಉದ್ಯಾನನಗರಿಯಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರುದ್ಧದ ಪಂದ್ಯಾಟದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಭರ್ಜರಿ ಜಯವನ್ನು ಸಾಧಿಸಿತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಕೋಲ್ಕತ್ತಾ ತಂಡ, ಆರ್‌ಸಿಬಿಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತ್ತು. ಇನ್ನೂ ಆರ್‌ಸಿಬಿ 183 ರನ್‌ಗಳ ಗೆಲುವಿನ ಗುರಿಯನ್ನು ನೀಡಿತ್ತು.
ಇದನ್ನು ಸುಲಭವಾಗಿ ಬೆನ್ನಟ್ಟಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 3 ವಿಕೆಟ್‌ನ ನಷ್ಟದೊಂದಿಗೆ ಅಮೋಘ ಗೆಲುವು ಪಡೆದುಕೊಂಡಿತು.
ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 182 ರನಗ್ ಗಳಿಸಿತು.