Select Your Language

Notifications

webdunia
webdunia
webdunia
webdunia

ಐಪಿಎಲ್‌ ಬೆಟ್ಟಿಂಗ್‌ನಲ್ಲಿ 1 ಕೋಟಿ ಸಾಲ: ಸಾಲಗಾರರ ಕಿರುಕುಳಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ

Darshan Babu

Sampriya

ಚಿತ್ರದುರ್ಗಾ , ಮಂಗಳವಾರ, 26 ಮಾರ್ಚ್ 2024 (15:32 IST)
ಚಿತ್ರದುರ್ಗಾ: ಎಂಜಿನಿಯರ್‌ ಒಬ್ಬ ಐಪಿಎಲ್‌ ಬೆಟ್ಟಿಂಗ್‌ನಲ್ಲಿ ಒಂದು ಕೋಟಿ ಹಣ ಕಳೆದುಕೊಂಡು ಸಾಲಗಾರರ ಕಿರುಕುಳಕ್ಕೆ  ಆತನ 23 ವರ್ಷದ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿತ್ರದುರ್ಗಾದಲ್ಲಿ ನಡೆದಿದೆ.

ದರ್ಶನ್ ಬಾಬು ಅವರು ಇಂಜಿನಿಯರ್ ಆಗಿದ್ದು, 2021ರಿಂದ ಕ್ರಿಕೆಟ್ ಪಂದ್ಯಗಳಲ್ಲಿ ಬೆಟ್ಟಿಂಗ್‌ನಿಂದ ತೊಡಗಿಕೊಳ್ಳುತ್ತಿದ್ದರು. ಇದರಿಂದ 1 ಕೋಟಿ ಹಣವನ್ನು ಕಳೆದುಕೊಂಡು ಸಾಲಗಾರರ ಕಿರುಕುಳಕ್ಕೆ ಆತನ ಪತ್ನಿ 23ವರ್ಷದ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕುಟುಂಬದ ಪ್ರಕಾರ, ದರ್ಶನ್ ₹ 1 ಕೋಟಿಗೂ ಹೆಚ್ಚು ಸಾಲವನ್ನು ಮಾಡಿದ್ದಾರೆ. ಹೊಸದುರ್ಗದಲ್ಲಿ ಸಣ್ಣ ನೀರಾವರಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಅವರು 2021 ರಿಂದ 2023 ರವರೆಗೆ ಐಪಿಎಲ್ ಬೆಟ್ಟಿಂಗ್ ಕ್ಷೇತ್ರದಲ್ಲಿ ಸಿಕ್ಕಿಬಿದ್ದಿದ್ದರು. ಇದು ದಂಪತಿಗಳ ಹಣಕಾಸಿನ ಮೇಲೆ ದೊಡ್ಡ ಹೊಡೆತವನ್ನು ನೀಡಿತ್ತು.  

ರಂಜಿತಾ 2020 ರಲ್ಲಿ ದರ್ಶನ್ ಅವರನ್ನು ವಿವಾಹವಾದರು. ದರ್ಶನ್ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿರುವ ಬಗ್ಗೆ ಸತ್ಯವನ್ನು ಅವರು 2021 ರಲ್ಲಿ ಅರಿತುಕೊಂಡರು ಎಂದು ಆಕೆಯ ತಂದೆ ವೆಂಕಟೇಶ್ ಹೇಳಿಕೊಂಡಿದ್ದಾರೆ.

ಲೇವಾದೇವಿಗಾರರ ನಿರಂತರ ಕಿರುಕುಳದಿಂದ ಮಗಳು ತೀವ್ರ ನೊಂದಿದ್ದು, ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ವೆಂಕಟೇಶ್ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ ಸಾಲ ನೀಡಿದ 13 ಮಂದಿಯನ್ನು ಹೆಸರಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮ ಡಿಕೆ ಸುರೇಶ್ ಗೆಲ್ಲಿಸುವುದು ಡಿಕೆ ಶಿವಕುಮಾರ್ ಗೆ ಮರ್ಯಾದೆ ಪ್ರಶ್ನೆ