Publish Date: Tue, 28 May 2024 (20:52 IST)
Updated Date: Tue, 28 May 2024 (21:00 IST)
ನವದೆಹಲಿ: ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ರಿಯಾನ್ ಪರಾಗ್ ತನ್ನ ಯೂಟ್ಯೂಬ್ ಹುಡುಕಾಟದ ಹಿಸ್ಟರಿ ಬಹಿರಂಗವಾಗಿ ಪೇಚಿಗೆ ಸಿಲುಕಿದ್ದಾರೆ.
ರಿಯಾನ್ ಪರಾಗ್ ಯೂಟ್ಯೂಬ್‌ನಲ್ಲಿ ಬಾಲಿವುಡ್ ನಟಿಯರಾದ ಅನನ್ಯಾ ಪಾಂಡೆ ಮತ್ತು ಸಾರಾ ಅಲಿ ಖಾನ್ ಹೆಸರು ಸೇರಿದ್ದ ಅಚ್ಚರಿ ಸಂಗತಿ ಎಂದರೆ ಈ ಇಬ್ಬರು ನಟಿಯರ ಹಾಟ್ ಫೋಟೋ ಸರ್ಚ್ ಮಾಡಿ ಇದೀಗ ಸುದ್ದಿಯಾಗಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, 22 ವರ್ಷದ ರಿಯಾನ್ ಪರಾಗ್ ಯೂಟ್ಯೂಬ್‌ನಲ್ಲಿ ಏನು ಹುಡುಕುತ್ತಿದ್ದಾರೆ ಎಂಬುದನ್ನು ತೋರಿಸಲಾಗಿದೆ. ಹುಡುಕಾಟದ ಸಮಯದಲ್ಲಿ "ಅನನ್ಯಾ ಪಾಂಡೆ ಹಾಟ್," "ಸಾರಾ ಅಲಿ ಖಾನ್ ಹಾಟ್" ಮತ್ತು ವಿರಾಟ್ ಕೊಹ್ಲಿ ಎಂದು ಸರ್ಚ್ ಮಾಡಿದ್ದಾರೆ. ಇದು ರಿಯಾನ್ ಪರಾಗ್‌ನ ನಿಜವಾದ ಹುಡುಕಾಟ ಇತಿಹಾಸ ಎಂದು ಮಾಜಿ ಬಳಕೆದಾರರು ತಮ್ಮ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.
ಸದ್ಯ ಇದೀಗ ರಿಯಾನ್ ಪರಾಗ್ ಅವರ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.