Select Your Language

Notifications

webdunia
webdunia
webdunia
webdunia

ರಾಧಿಕಾ ಪಂಡಿತ್ ಬರ್ತ್ ಡೇ: ರಾಕಿಂಗ್ ಸ್ಟಾರ್ ಯಶ್ ಕೊಟ್ಟಿದ್ದ ಮರೆಯಲಾಗದ ಗಿಫ್ಟ್ ಇದುವೇ

Radhika Pandit
Photo Courtesy: Twitter
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಪತ್ನಿ, ನಟಿ ರಾಧಿಕಾ ಪಂಡಿತ್ ಗೆ ಇಂದು ಜನ್ಮದಿನದ ಸಂಭ್ರಮ. ರಾಧಿಕಾ ಪಂಡಿತ್ ಇದೀಗ 40 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.

ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಎಂದೇ ಜನಪ್ರಿಯರಾಗಿರುವ ರಾಧಿಕಾ ಮದುವೆಯಾಗಿ ಮಕ್ಕಳಾದ ಮೇಲೆ ಸಿನಿಮಾಗಳಿಂದ ದೂರವುಳಿದಿದ್ದರು. ಕೇವಲ ಪತಿ ಯಶ್ ಸಿನಿಮಾಗೆ ಬೆಂಬಲವಾಗಿ ನಿಂತಿದ್ದಾರೆ. ಆದರೆ ಅವರು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿಕೊಂಡಾಗಲೆಲ್ಲಾ ಅಭಿಮಾನಿಗಳು ಮತ್ತೆ ಯಾವಾಗ ಸಿನಿಮಾಗೆ ಬರುತ್ತೀರಿ ಎಂದು ಪ್ರಶ್ನೆ ಕೇಳುತ್ತಲೇ ಇರುತ್ತಾರೆ.

ಇಬ್ಬರು ಮಕ್ಕಳ ತಾಯಿಯಾದರೂ ತಮ್ಮ ಫಿಟ್ನೆಸ್, ಸೌಂದರ್ಯದ ಬಗ್ಗೆ ರಾಧಿಕಾ ಅಷ್ಟೇ ಕಾಳಜಿ ವಹಿಸುತ್ತಾರೆ. ಅದಕ್ಕೆ ಈಗಲೂ ಅವರು ಅದೇ ರೀತಿ ಜನಪ್ರಿಯತೆ ಉಳಿಸಿಕೊಂಡಿದ್ದಾರೆ. ಯಶ್-ರಾಧಿಕಾ ಜೋಡಿಯನ್ನು ಮತ್ತೆ ತೆರೆ ಮೇಲೆಯೂ ನೋಡಬೇಕು ಎಂದು ಎಷ್ಟೋ ಅಭಿಮಾನಿಗಳು ಆಗ್ರಹಿಸುತ್ತಲೇ ಇರುತ್ತಾರೆ. ಆದರೆ ರಾಧಿಕಾ ಮಾತ್ರ ಇನ್ನೂ ತಮ್ಮ ಸಿನಿಮಾ ಕಮ್ ಬ್ಯಾಕ್ ಬಗ್ಗೆ ಚಿಂತಿಸಿದಂತೆಯೇ ಇಲ್ಲ.

ಯಶ್ ಮತ್ತು ರಾಧಿಕಾ ಕಿರುತೆರೆ ಮೂಲಕ ಸ್ಯಾಂಡಲ್ ವುಡ್ ಗೆ ಲಗ್ಗೆಯಿಟ್ಟವರು. ಮೊಗ್ಗಿನ ಮನಸ್ಸು ಸಿನಿಮಾದಲ್ಲಿ ಇಬ್ಬರೂ ಜೋಡಿಯಾಗಿ ಅಭಿನಯಿಸಿದ್ದರು. ಆ ಕಾಲದಿಂದಲೂ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಒಮ್ಮೆಯಂತೂ ತಮ್ಮ ಹುಟ್ಟುಹಬ್ಬ ದಿನ ಯಶ್ ಮಧ‍್ಯರಾತ್ರಿ ಹೂಗುಚ್ಛ ಸಿಗಲಿಲ್ಲವೆಂದು ಕೊತ್ತಂಬರಿ ಸೊಪ್ಪಿನ ಕಟ್ಟು ತಂದು ಉಡುಗೊರೆ ನೀಡಿದ್ದರು ಎಂದಿದ್ದರು ರಾಧಿಕಾ. ತನ್ನ ಜೀವನದಲ್ಲಿ ಯಶ್ ಕೊಟ್ಟ ಮರೆಯಲಾಗದ ಬರ್ತ್ ಡೇ ಗಿಫ್ಟ್ ಎಂದರೆ ಅದುವೇ ಎಂದು ರಾಧಿಕಾ ಹಿಂದೊಮ್ಮೆ ಹೇಳಿಕೊಂಡಿದ್ದರು. ಪ್ರೀತಿಸುವುದು ಮಾತ್ರ, ಮದುವೆಯಾದ ಮೇಲೂ ಜೊತೆಯಾಗಿ ಹೇಗಿರಬೇಕು ಎಂದು ಇನ್ನೊಬ್ಬರು ಮಾದರಿಯಾಗಿ ನೋಡುವ ಜೋಡಿ ಯಶ್-ರಾಧಿಕಾರದ್ದು. ನಮ್ಮ ಕಡೆಯಿಂದ ರಾಧಿಕಾಗೆ ಒಂದು ಹ್ಯಾಪೀ ಬರ್ತ್ ಡೇ.

Share this Story:

Follow Webdunia kannada

ಮುಂದಿನ ಸುದ್ದಿ

ಎರಡು ದಿನದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಮಾಡಿದ ನಟಿ ವಿಜಯಲಕ್ಷ್ಮಿ