Photo Courtesy: Instagram
ಬೆಂಗಳೂರು: ಸ್ಯಾಂಡಲ್ ವುಡ್ ನಟ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಈಗ ಅಯೋಧ‍್ಯೆಗೆ ಭೇಟಿ ನೀಡಿದ್ದಾರೆ. ಅಯೋಧ‍್ಯೆಯಲ್ಲಿ ಶ್ರೀರಾಮನ ದರ್ಶನ ಮಾಡಿದ್ದಾರೆ.
ತಮ್ಮ ಸಂಗಡಿಗರೊಂದಿಗೆ ರಕ್ಷಿತ್ ಅಯೋಧ್ಯೆಗೆ ಭೇಟಿ ನೀಡಿದ್ದು, ಪಕ್ಕಾ ಸಾಂಪ್ರದಾಯಿಕ ದಿರಿಸಿನಲ್ಲಿ ಕಂಗೊಳಿಸಿದ್ದಾರೆ. ಅವರು ಅಯೋಧ್ಯೆಯಲ್ಲಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೇಸರಿ ಶಾಲು, ತಿಲಕ ಹಾಕಿಕೊಂಡು ಅಯೋಧ್ಯೆಯಲ್ಲಿ ರಕ್ಷಿತ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ತಮ್ಮ ಒಂದಷ್ಟು ಸಂಗಡಿಗರ ಜೊತೆ ನೆಲದ ಮೇಲೆ ಕುಳಿತು ಸಾಮಾನ್ಯರಂತೇ ಕಾಲ ಕಳೆದಿದ್ದಾರೆ. ರಕ್ಷಿತ್ ಎಂಥಾ ದೈವ ಭಕ್ತ ಎಂದು ಎಲ್ಲರಿಗೂ ಗೊತ್ತು. ಬಿಡುವು ಸಿಕ್ಕಾಗಲೆಲ್ಲಾ ತಮ್ಮ ಊರಿನ ದೈವ ಕೋಲಗಳಿಗೆ ಭೇಟಿ ಕೊಡುತ್ತಲೇ ಇರುತ್ತಾರೆ. ದೈವ-ದೇವರ ಮೇಲೆ ಅಪಾರ ಭಕ್ತಿ ಹೊಂದಿದ್ದಾರೆ.
ಸದ್ಯಕ್ಕೆ ಸಪ್ತಸಾಗರದಾಚೆ ಎಲ್ಲೊ 2 ಮುಗಿಸಿಕೊಂಡು ರಕ್ಷಿತ್ ಸುದೀರ್ಘ ಬ್ರೇಕ್ ನಲ್ಲಿದ್ದಾರೆ. ಮುಂದೆ ಪುಣ್ಯಕೋಟಿ, ರಿಚರ್ಡ್ ಆಂಟನಿ ಸಿನಿಮಾಗಳನ್ನು ಕೈಗೆತ್ತಿಕೊಳ್ಳಲಿದ್ದಾರೆ. ಇದರ ನಡುವೆ ಅವರ ಸ್ವಂತ ಬ್ಯಾನರ್ ನಿಂದ ಕೆಲವು ಸಿನಿಮಾಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಇದರ ನಡುವೆ ಸಿಕ್ಕ ಬಿಡುವಿನ ವೇಳೆಯಲ್ಲಿ ಐತಿಹಾಸಿಕ ಅಯೋಧ್ಯೆ ರಾಮಲಲ್ಲಾನನ್ನು ಭೇಟಿ ಮಾಡಿದ್ದಾರೆ.