Select Your Language

Notifications

webdunia
webdunia
webdunia
webdunia

ಚಿರಂಜೀವಿ ಜೊತೆ ಅಮ್ಮ ಶ್ರೀದೇವಿ, ರಾಮ್ ಚರಣ್ ಜೊತೆ ಮಗಳು ಜಾಹ್ನವಿ ರೊಮ್ಯಾನ್ಸ್

Jahnvi Kapoor

Krishnaveni K

ಹೈದರಾಬಾದ್ , ಬುಧವಾರ, 6 ಮಾರ್ಚ್ 2024 (11:02 IST)
Photo Courtesy: Twitter
ಹೈದರಾಬಾದ್: ಬಾಲಿವುಡ್ ನಟಿ ಜಾಹ್ನವಿ ಕಪೂರ್ ಮತ್ತೊಂದು ಟಾಲಿವುಡ್ ಸಿನಿಮಾಗೆ ನಾಯಕಿಯಾಗಿ ಘೋಷಣೆಯಾಗಿದ್ದಾರೆ. ಇಂದು ಅವರ ಜನ್ಮದಿನದಂದೇ ಈ ಸಿಹಿ ಸುದ್ದಿ ಸಿಕ್ಕಿದೆ.

ರಾಮ್ ಚರಣ್ ತೇಜ ನಾಯಕರಾಗಿರುವ ಆರ್ ಸಿ16 ಸಿನಿಮಾಗೆ ಜಾಹ್ನವಿ ಕಪೂರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇಂದು ಅವರ ಜನ್ಮದಿನ ನಿಮಿತ್ತ ಚಿತ್ರತಂಡ ಅಧಿಕೃತವಾಗಿ ಈ ಸುದ್ದಿ ಘೋಷಣೆ ಮಾಡಿದೆ. ಇದಕ್ಕೆ ಮೊದಲು ರಾಮ್ ಚರಣ್ ಸಿನಿಮಾಗೆ ಜಾಹ್ನವಿ ನಾಯಕಿಯಾಗಲಿದ್ದಾರೆ ಎಂಬ ಸುದ್ದಿಗಳಿತ್ತು. ಅದೀಗ ನಿಜವಾಗಿದೆ.

ವಿಶೇಷವೆಂದರೆ ಇದಕ್ಕೆ ಮೊದಲು ಜಾಹ್ನವಿ ತಾಯಿ, ಖ್ಯಾತ ನಟಿ ಶ್ರೀದೇವಿ ಈ ಮೊದಲು ರಾಮ್ ಚರಣ್ ತಂದೆ, ಮೆಗಾಸ್ಟಾರ್ ಚಿರಂಜೀವಿಗೆ ನಾಯಕಿಯಾಗಿ ಅಭಿನಯಿಸಿದ್ದರು. ಇದೀಗ ಚಿರಂಜೀವಿ ಪುತ್ರನಿಗೆ ಶ್ರೀದೇವಿ ಪುತ್ರಿ ನಾಯಕಿಯಾಗುತ್ತಿರುವುದು ವಿಶೇಷ. ಜಾಹ್ನವಿ ಈಗಾಗಲೇ ತೆಲುಗಿನಲ್ಲಿ ಜ್ಯೂ.ಎನ್ ಟಿಆರ್ ನಾಯಕರಾಗಿರುವ ದೇವರ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಆರ್ ಸಿ16 ಸಿನಿಮಾಗೆ ಉಪ್ಪೇನ ಸಿನಿಮಾ ಖ್ಯಾತಿಯ ಬುಚ್ಚಿ ಬಾಬು ಸನಾ ನಿರ್ದೇಶನ ಮಾಡುತ್ತಿದ್ದಾರೆ. ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ. ಇದೀಗ ಜಾಹ್ನವಿ ಕೂಡಾ ಈ ಬಹುನಿರೀಕ್ಷಿತ ಸಿನಿಮಾ ತಂಡಕ್ಕೆ ಸೇರ್ಪಡೆಯಾಗಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೌತ್, ಬಾಲಿವುಡ್ ಎನ್ನಬೇಡಿ: ರಶ್ಮಿಕಾ ಮಂದಣ್ಣ ಖಡಕ್ ಮಾತು