ಬೆಂಗಳೂರು: ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಸಿನಿಮಾ ರಾಜ ಮಾರ್ತಂಡ ಬಿಡುಗಡೆಗೆ ಸಿದ್ಧವಾಗಿದೆ. ಅಕ್ಟೋಬರ್ 6 ರಂದು ಸಿನಿಮಾ ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ.
ಈ ಕುರಿತಂತೆ ನಿನ್ನೆ ಚಿತ್ರತಂಡದ ಜೊತೆ ಪತ್ರಿಕಾಗೋಷ್ಠಿಯಲ್ಲಿ ಚಿರು ಪತ್ನಿ ಮೇಘನಾ, ಧ್ರುವ ಸರ್ಜಾ, ಸುಂದರ್ ರಾಜ್ ಚಿರು ಬಗ್ಗೆ ಮಾತನಾಡಿದ್ದಾರೆ. ಚಿರು ಬಗ್ಗೆ ಮಾತನಾಡುತ್ತಾ ಧ್ರುವ ಸರ್ಜಾ, ಮೇಘನಾ ರಾಜ್ ಭಾವುಕರಾದರು.
ಇದು ಚಿರು ಕೊನೆಯ ಸಿನಿಮಾವಾಗಬಹುದು ಎಂದು ಅಂದುಕೊಂಡಿರಲಿಲ್ಲ ಎಂದು ಮೇಘನಾ ಭಾವುಕರಾಗಿ ಹೇಳಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಚಿರು ಪಾತ್ರಕ್ಕೆ ಧ್ರುವ ಡಬ್ಬಿಂಗ್ ಮಾಡಿದ್ದಾರೆ. ಅಣ್ಣನ ಪಾತ್ರಕ್ಕೆ ಡಬ್ಬಿಂಗ್ ಮಾಡುವಾಗ ಆದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಡಬ್ಬಿಂಗ್ ಮಾಡುವಾಗ ಅಣ್ಣನನ್ನು ಕಣ್ತುಂಬಿಕೊಂಡೆ. ಈ ಸಿನಿಮಾದಲ್ಲಿ ಬಹಳ ಖುಷಿಯಿಂದ ನಟಿಸಿದ್ದಾನೆ. ಅವನ ನೆನಪು ಪ್ರತಿ ದಿನವೂ ನನ್ನನ್ನು ಕಾಡುತ್ತದೆ ಎಂದಿದ್ದಾರೆ.