ಬೆಂಗಳೂರು: ಶಿವರಾಜ್ ಕುಮಾರ್ ನಾಯಕರಾಗಿರುವ ಬಹುನಿರೀಕ್ಷಿತ ಘೋಸ್ಟ್ ಸಿನಿಮಾದ ಟ್ರೈಲರ್ ಇಂದು ಲಾಂಚ್ ಆಗಿದೆ.
ಟ್ರೈಲರ್ ತುಂಬಾ ಶಿವಣ್ಣನ ಆಕ್ಷನ್, ಲುಕ್ ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ಭರ್ಜರಿ ಸಾಹಸ ದೃಶ್ಯಗಳಲ್ಲಿ ಶಿವರಾಜ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಇದೊಂದು ಪಕ್ಕಾ ಮಾಸ್ ಸಿನಿಮಾ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಶಿವಣ್ಣ ಜೊತೆಗೆ ಮಲಯಾಳಂನ ಜನಪ್ರಿಯ ನಟ ಜಯರಾಂ, ಬಾಲಿವುಡ್ ನ ಅನುಪಮ್ ಖೇರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಅದರಲ್ಲೂ ಅನುಪಮ್ ಖೇರ್ ಜೊತೆಗೆ ಬರುವ ದೃಶ್ಯವೊಂದರಲ್ಲಿ ಶಿವಣ್ಣನ ಕ್ಲೀನ್ ಶೇವ್ ಲುಕ್ ನೋಡಿದರೆ ಅವರ ಮೊದಲ ಸಿನಿಮಾ ಆನಂದ್ ನೆನಪಾಗುತ್ತದೆ. ಅಕ್ಟೋಬರ್ 19 ರಂದು ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ.