Select Your Language

Notifications

webdunia
webdunia
webdunia
webdunia

ನಟ ನಾಗಭೂಷಣ್ ಕಾರು ಡಿಕ್ಕಿಯಾಗಿ ಮಹಿಳೆ ಸಾವು: ನಟ ಅರೆಸ್ಟ್

ನಟ ನಾಗಭೂಷಣ್ ಕಾರು ಡಿಕ್ಕಿಯಾಗಿ ಮಹಿಳೆ ಸಾವು: ನಟ ಅರೆಸ್ಟ್
ಬೆಂಗಳೂರು , ಭಾನುವಾರ, 1 ಅಕ್ಟೋಬರ್ 2023 (13:52 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಜನಪ್ರಿಯರಾಗಿರುವ ನಟ ನಾಗಭೂಷಣ್ ಕಾರು ಡಿಕ್ಕಿಯಾಗಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಆಕೆಯ ಪತಿಗೆ ಗಂಭೀರ ಗಾಯವಾಗಿದೆ. ಈ ಸಂಬಂಧ ನಾಗಭೂಷಣ್ ಅವರನ್ನು ಬಂಧಿಸಲಾಗಿದೆ.

ಕೋಣನಕುಂಟೆ ಕ್ರಾಸ್ ಬಳಿ ದುರಂತ ಸಂಭವಿಸಿದೆ. ಪಾದಚಾರಿ ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿದ್ದ ದಂಪತಿಗೆ ನಾಗಭೂಷಣ್ ಚಲಾಯಿಸುತ್ತಿದ್ದ ಕಾರು ಡಿಕ್ಕಿಯಾಗಿದೆ. ತಲೆಗೆ ಪೆಟ್ಟು ಬಿದ್ದ ಪರಿಣಾಮ 48 ವರ್ಷದ ಪ್ರೇಮಾ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ.

ಆಕೆಯ ಜೊತೆಗಿದ್ದ ಪತಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆ ಸೇರಿದ್ದಾರೆ. ಈ ಸಂಬಂಧ ಮೃತ ಮಹಿಳೆಯ ಪುತ್ರ ಪಾರ್ಥ ದೂರು ನೀಡಿದ್ದು, ಆ ಸಂಬಂಧ ನಟನನ್ನು ಪೊಲೀಸರು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದಳಪತಿ ವಿಜಯ್ ಲಿಯೋ ಸಿನಿಮಾಗೆ ಕರ್ನಾಟಕದಲ್ಲಿ ಅಡ್ಡಿ ಆತಂಕ