Publish Date: Sat, 30 Sep 2023 (09:54 IST)
Updated Date: Sat, 30 Sep 2023 (09:56 IST)
ಬೆಂಗಳೂರು: ನಿನ್ನೆ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ನಲ್ಲಿ ಕನ್ನಡ ಚಿತ್ರರಂಗವೂ ಪಾಲ್ಗೊಂಡಿತ್ತು.
ಸಿನಿಮಾ ಶೂಟಿಂಗ್, ಪ್ರದರ್ಶನ ಬಂದ್ ಮಾಡಿ ಚಿತ್ರರಂಗ ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿತ್ತು. ಇದಕ್ಕೆ ಕರ್ನಾಟಕ ವಾಣಿಜ್ಯ ಮಂಡಳಿಯೇ ನೇತೃತ್ವ ವಹಿಸಿತ್ತು.
ಆದರೆ ದೊಡ್ಮನೆ ಕುಡಿ ಯುವರಾಜ್ ಕುಮಾರ್ ನಾಯಕರಾಗಿರುವ ಯುವ ಸಿನಿಮಾದ ಶೂಟಿಂಗ್ ಮೈಸೂರಿನಲ್ಲಿ ಬಂದ್ ನಡುವೆಯೇ ನಡೆಯುತ್ತಿತ್ತು ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಯುವರಾಜ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಹೋರಾಟಕ್ಕೆ ನಮ್ಮದೂ ಬೆಂಬಲವಿದೆ. ನಾವು ಶೂಟಿಂಗ್ ಮಾಡಿರಲಿಲ್ಲ. ಮೊನ್ನೆ ಶೂಟಿಂಗ್ ಮಾಡುವಾಗ ಲೈಟ್ ಕೆಟ್ಟು ಹೋಗಿತ್ತು. ಅದನ್ನು ನೋಡಲು ಬಂದಿದ್ದೆವಷ್ಟೇ ಎಂದಿದ್ದಾರೆ.