Select Your Language

Notifications

webdunia
webdunia
webdunia
webdunia

ನಟ ಜಗ್ಗೇಶ್ ಗೆ ಅನಾರೋಗ್ಯ, ದೆಹಲಿಯಲ್ಲಿ ಚಿಕಿತ್ಸೆ

ನಟ ಜಗ್ಗೇಶ್ ಗೆ ಅನಾರೋಗ್ಯ, ದೆಹಲಿಯಲ್ಲಿ ಚಿಕಿತ್ಸೆ
ಬೆಂಗಳೂರು , ಶನಿವಾರ, 30 ಸೆಪ್ಟಂಬರ್ 2023 (08:50 IST)
Photo Courtesy: Instagram
ಬೆಂಗಳೂರು: ನಟ, ಸಂಸದ ನವರಸನಾಯಕ ಜಗ್ಗೇಶ್ ಬೆನ್ನು ನೋವಿಗೊಳಗಾಗಿದ್ದು, ನವದೆಹಲಿಯಲ್ಲಿ ಚಿಕಿತ್ಸೆಗೊಳಗಾಗಿದ್ದಾರೆ.

ಇದೀಗ ಜಗ್ಗೇಶ್ ನಾಯಕರಾಗಿರುವ ತೋತಾಪುರಿ 2 ಸಿನಿಮಾ ಬಿಡುಗಡೆಯಾಗಿದೆ. ಆ ಸಿನಿಮಾ ಪ್ರಚಾರಕ್ಕೆ ಜಗ್ಗೇಶ್ ಬಂದಿರಲಿಲ್ಲ. ಇನ್ನು, ನಿನ್ನೆ ಕಾವೇರಿ ವಿವಾದದ ಕುರಿತಂತೆ ಸ್ಯಾಂಡಲ್ ವುಡ್ ನಡೆಸಿದ್ದ ಹೋರಾಟದಲ್ಲೂ ಜಗ್ಗೇಶ್ ಗೈರಾಗಿದ್ದರು.

ಇದರ ಬೆನ್ನಲ್ಲೇ ಜಗ್ಗೇಶ್ ಎಂಆರ್ ಐ ಸ್ಕ್ಯಾನಿಂಗ್ ಗೊಳಗಾಗುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇತ್ತೀಚೆಗೆ ಕೇದರನಾಥ ಪ್ರವಾಸ ಮಾಡಿದ್ದ ಜಗ್ಗೇಶ್ ಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಬೆನ್ನೆಲುಬಿಗೆ ಸಂಬಂಧಿಸಿದ ಎಲ್3-ಎಲ್4 ಇಂಜ್ಯುರಿಗೊಳಗಾಗಿರುವ ಜಗ್ಗೇಶ್ ಈಗ ನವದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗಳ ನಾಮಕರಣ ಶಾಸ್ತ್ರ ನೆರವೇರಿಸಿದ ಧ್ರುವ ಸರ್ಜಾ ದಂಪತಿ