Select Your Language

Notifications

webdunia
webdunia
webdunia
webdunia

ರಚಿತಾ ರಾಂ ಹಾದಿಯಲ್ಲಿ ಅಭಿಷೇಕ್ ಅಂಬರೀಶ್

ರಚಿತಾ ರಾಂ ಹಾದಿಯಲ್ಲಿ ಅಭಿಷೇಕ್ ಅಂಬರೀಶ್
ಬೆಂಗಳೂರು , ಸೋಮವಾರ, 2 ಅಕ್ಟೋಬರ್ 2023 (08:50 IST)
Photo Courtesy: Twitter
ಬೆಂಗಳೂರು: ಕಾವೇರಿ ನದಿ ವಿಚಾರವಾಗಿ ಹೋರಾಟಗಳು ನಡೆಯುತ್ತಿದ್ದು ರೈತರು ಸಂಕಷ್ಟದಲ್ಲಿರುವಾಗ ಈ ಬಾರಿ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಲ್ಲ ಎಂದು ನಟಿ ರಚಿತಾ ರಾಂ ಮೊನ್ನೆಯಷ್ಟೇ ಸೋಷಿಯಲ್ ಮೀಡಿಯಾ ಮೂಲಕ ಹೇಳಿದ್ದರು.

ಈ ಬಾರಿ ಮನೆ ಮುಂದೆ ಬರಬೇಡಿ. ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕಾರಣಕ್ಕೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಲು ಮನಸ್ಸಾಗುತ್ತಿಲ್ಲ ಎಂದಿದ್ದರು.

ಇದೀಗ ಜ್ಯೂ.ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಕೂಡಾ ಅದೇ ಹಾದಿಯಲ್ಲಿದ್ದಾರೆ. ನಾಳೆ ಅಭಿಷೇಕ್ ಜನ್ಮದಿನವಿದ್ದು ಈ ಬಾರಿ ರೈತರು ಸಂಕಷ್ಟದಲ್ಲಿರುವಾಗ ಅದ್ಧೂರಿ ಆಚರಣೆ ಮಾಡಲ್ಲ ಎಂದಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು ‘ಈ ವರ್ಷ ನಮ್ಮ ರಾಜ್ಯದಲ್ಲಿ ಬರಗಾಲ ಉಂಟಾಗಿರುವುದರಿಂದ ಹಾಗೂ ನಮ್ಮ ಕಾವೇರಿಗಾಗಿ ಹಲವಾರು ಜನರು ಹೋರಾಟ ಮಾಡುತ್ತಿರುವುದರಿಂದ ಈ ವರ್ಷ ನಾನು ನನ್ನ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳಲು ಇಚ್ಛಿಸಿದ್ದೇನೆ. ಎಲ್ಲಾ ರೆಬಲ್ ಅಭಿಮಾನಿಗಳು ನೀವು ಇರುವಲ್ಲಿಯೇ ನನಗೆ ಶುಭ ಹಾರೈಸಿ, ಆಶೀರ್ವದಿಸಿ. ಅಭಿಮಾನಿಗಳು ಪ್ರೀತಿಯಿಂದ ಮನೆ ಹತ್ತಿರ ಬಂದರೂ ಬರಬೇಡಿ ಎನ್ನುವುದು ನಮ್ಮ ಸಂಪ್ರದಾಯವಲ್ಲ. ಆದರೆ ಬಂದವರು ಯಾವುದೇ ಹಾರ, ಕೇಕ್, ಪಟಾಕಿಗಳು ಹಾಗೂ ಉಡುಗೊರೆಗಳನ್ನು ತರದೆ ಶುಭ ಹಾರೈಸಿ’ ಎಂದು ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಯುಕ್ತಾಗೆ ಮೈತುಂಬಾ ಬಟ್ಟೆ ಹಾಕಮ್ಮ ಎಂದ ನೆಟ್ಟಿಗರು